ETV Bharat / sitara

ಟಿವಿ ಸ್ಟಾರ್​​ ಸಾರಾ ಖಾನ್​​ಗೂ ಕೊರೊನಾ ವೈರಸ್​​... ಮಾಹಿತಿ ನೀಡಿದ ನಟಿ - ಟಿವಿ ಸ್ಟಾರ್​​ ಸಾರಾ ಖಾನ್​

ಮಹಾಮಾರಿ ಕೊರೊನಾ ವೈರಸ್​​ ಇದೀಗ ಟಿವಿ ಸ್ಟಾರ್​ ಸಾರಾ ಖಾನ್​ಗೂ ಕಾಣಿಸಿಕೊಂಡಿದ್ದು, ಮನೆಯಲ್ಲಿ ಕ್ವಾರಂಟೈನ್​ಗೊಳಗಾಗಿದ್ದಾರೆ.

TV star Sara Khan
TV star Sara Khan
author img

By

Published : Sep 10, 2020, 6:29 PM IST

ಮುಂಬೈ: ಟಿವಿ ಸ್ಟಾರ್​ ಸಾರಾ ಖಾನ್​ಗೂ ಕೊರೊನಾ ವೈರಸ್​​ ತಗುಲಿರುವುದು ದೃಢಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇನ್​​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕೊರೊನಾ ವೈರಸ್​ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಶೂಟಿಂಗ್​​ನಿಂದ ವಿರಾಮ ಪಡೆದುಕೊಂಡಿದ್ದಾಗಿ ಹೇಳಿದ್ದು, ಮನೆಯಲ್ಲಿ ಕ್ವಾರಂಟೈನ್​​ಗೊಳಗಾಗಿದ್ದಾರೆ.

ದುರದೃಷ್ಟವಶಾತ್​, ಇಂದು ನಾನು ಕೊರೊನಾ ವೈರಸ್​​ ಸೋಂಕಿಗೆ ಒಳಗಾಗಿದ್ದು, ವರದಿ ಪಾಸಿಟಿವ್​ ಎಂದು ಬಂದಿದೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಕ್ವಾರಂಟೈನ್​​ಗೊಳಗಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆ ಇದೆ ಎಂದಿದ್ದಾರೆ.

2007ರಲ್ಲಿ ಜನಪ್ರಿಯ ಟೆಲಿವಿಷನ್​ ಶೋ ಸಪ್ನಾ ಬಾಬುಲ್​ ಕಾದಲ್ಲಿ ನಟನೆ ಮಾಡಿ ಖ್ಯಾತಿ ಪಡೆದುಕೊಂಡಿದ್ದರು. ತದನಂತರ ಅನೇಕ ಧಾರಾವಾಹಿಗಳಲ್ಲಿ ಇವರು ಕಾಣಿಸಿಕೊಂಡಿದ್ದು, 2010ರಲ್ಲಿ ಬಿಗ್​ ಬಾಸ್​​ ಶೋ 4ನೇ ಆವೃತ್ತಿಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.