ETV Bharat / sitara

'ಫ್ರೆಂಚ್​ ಬಿರಿಯಾನಿ' ಸಂಭಾಷಣೆ ಬಗ್ಗೆ ಚರ್ಚೆ...ಈ ಬಗ್ಗೆ ಟಿ.ಎಸ್​​​. ನಾಗಾಭರಣ ಏನು ಹೇಳ್ತಾರೆ...?

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಫ್ರೆಂಚ್ ಬಿರಿಯಾನಿ' ಸಿನಿಮಾ ಹಾಸ್ಯದಿಂದ ಕೂಡಿದ್ದರೂ ಚಿತ್ರದ ಸಂಭಾಷಣೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪನ್ನಗಾಭರಣ ತಂದೆ ಟಿ.ಎಸ್​.ನಾಗಾಭರಣ ಪ್ರತಿಕ್ರಿಯಿಸಿದ್ದಾರೆ.

TS Nagabharana
ಟಿ.ಎಸ್​​. ನಾಗಾಭರಣ
author img

By

Published : Aug 14, 2020, 6:35 PM IST

ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​​​ ಅಡಿಯಲ್ಲಿ ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ದಾನಿಷ್ ಸೇಠ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಫ್ರೆಂಚ್​ ಬಿರಿಯಾನಿ' ಸಂಭಾಷಣೆ ಬಗ್ಗೆ ನಾಗಾಭರಣ ಪ್ರತಿಕ್ರಿಯೆ

ಮತ್ತೊಂದೆಡೆ 'ಫ್ರೆಂಚ್ ಬಿರಿಯಾನಿ' ಚಿತ್ರ ನೋಡಲು ಕಾಮಿಡಿಯಾಗಿದ್ರೂ ಡಬ್ಬಲ್ ಮೀನಿಂಗ್ ಸಂಭಾಷಣೆಯಿಂದ ತುಂಬಿ ಹೋಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟಿ.ಎಸ್​​. ನಾಗಾಭರಣ, ಪನ್ನಗಾಭರಣ 'ಹ್ಯಾಪಿ ನ್ಯೂ ಇಯರ್' ಸಿನಿಮಾ ಮಾಡಿದಾಗ ಆ ಚಿತ್ರದ ಬಗ್ಗೆ ಏಕೆ ಯಾರೂ ಚರ್ಚೆ ಮಾಡಲಿಲ್ಲ...? ಆ ಸಿನಿಮಾ ಬಹಳ ಚೆನ್ನಾಗಿತ್ತು. ಆದರೆ ಯಾರೊಬ್ಬರೂ ಸಿನಿಮಾ ಬಗ್ಗೆ ಮಾತನಾಡಲಿಲ್ಲ. ಆದರೆ 'ಫ್ರೆಂಚ್ ಬಿರಿಯಾನಿ' ಬಗ್ಗೆ ಏಕೆ ಕಮೆಂಟ್ ಮಾಡುತ್ತೀರಿ...? ಕನ್ನಡ ಚಿತ್ರರಂಗದಲ್ಲಿ 'ಫ್ರೆಂಚ್ ಬಿರಿಯಾನಿ' ರೀತಿ ಯಾರೂ ಚಿತ್ರ ಮಾಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಇದೆ ಎನ್ನುವವರು ಇಂದಿನ ಸಾಹಿತ್ಯದಲ್ಲಿ ಕೂಡಾ ಡಬಲ್ ಮೀನಿಂಗ್ ಇರುವುದನ್ನು ಏಕೆ ಚರ್ಚೆ ಮಾಡುವುದಿಲ್ಲ..? ಯಾವಾಗಲೂ ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂದು ಇರುತ್ತೆ ಆದರೆ ಇದು ಖಂಡಿತ ಕೆಟ್ಟ ಸಿನಿಮಾ ಅಲ್ಲ. ಇಂದಿನ ದಿನಗಳಲ್ಲಿ ರಾವಣ ಸಂಸ್ಕೃತಿ ಹೊಂದಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗಿವೆ. ಅಂತಹ ಸಿನಿಮಾಗಳಿಗೆ ನ್ಯಾಷನಲ್ ಅವಾರ್ಡ್ ಕೂಡಾ ಸಿಗುತ್ತಿದೆ. ನಾನು ಮಾಡುವ ಸಿನಿಮಾಗಳ ರೀತಿಯೇ ನನ್ನ ಮಗ ಕೂಡಾ ಮಾಡಬೇಕು ಎಂದೇನಿಲ್ಲ.

ಇಂದಿನ ಕಾಲದಲ್ಲಿ ಯಾರೂ ಕೂಡಾ ಸಾಮಾಜಿಕ ಕಳಕಳಿ ಉದ್ದೇಶದಿಂದ ಸಿನಿಮಾ ಮಾಡುತ್ತಿಲ್ಲ. ಎಲ್ಲರೂ ಹಣ ಗಳಿಸುವ ಉದ್ದೇಶದಿಂದಲೇ ಸಿನಿಮಾ ಮಾಡುತ್ತಿರುವುದು. ಅದೇ ರೀತಿ ಇದು ನನ್ನ ಮಗನ ಕ್ರಿಯೇಟಿವಿಟಿ. ಇಂದಿನ ಕಾಲಕ್ಕೆ ತಕ್ಕಂತೆ 'ಫ್ರೆಂಚ್ ಬಿರಿಯಾನಿ' ಸಿನಿಮಾ ತಯಾರಾಗಿದೆ ಎಂದು ಟಿ.ಎಸ್​​. ನಾಗಾಭರಣ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.