ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ನಟಿ ಕರಿನಾ ಕಪೂರ್, ತಮ್ಮ ಅಭಿಮಾನಿಗಳಿಗೆ ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಕಾರಣಕ್ಕೆ ನಟಿ ತೀವ್ರವಾಗಿ ಟ್ರೋಲ್ಗೆ ಒಳಗಾಗಿದ್ದಾರೆ.
ಈ ಸಂಬಂಧ ನಟಿ ಏಪ್ರಿಲ್ 28 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಜನರು ಕೋವಿಡ್-19 ಪ್ರೋಟೋಕಾಲ್ಗಳನ್ನು ಗಂಭೀರವಾಗಿ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ. ಮಾಸ್ಕ್ಗಳನ್ನು ಧರಿಸುವ ಪ್ರಾಮುಖ್ಯತೆಯ ಬಗ್ಗೆ ಹೇಳಿರುವ ಅವರು, ಯಾರಾದರೂ ನಿಯಮಗಳನ್ನು ಉಲ್ಲಂಘಿಸುವ ಮೊದಲು, ಕೋವಿಡ್ ವಿರುದ್ದ ದೇಶದಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ವಾರಿಯರ್ಸ್ಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಬರೆದು ಕೊಂಡಿದ್ದಾರೆ.
- " class="align-text-top noRightClick twitterSection" data="
">
ನಮ್ಮ ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಜನರೂ ಈಗಲೂ ಇದ್ದಾರೆ ಎಂಬುದನ್ನು ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿ ನೀವು ಹೊರಹೋಗುವಾಗ ಅಥವಾ ನಿಮ್ಮ ಮಾಸ್ಕ್ ಗಲ್ಲದ ಕೆಳಗೆ ಜಾರಿಸುವಾಗ ಅಥವಾ ನಿಯಮಗಳನ್ನು ಉಲ್ಲಂಘಿಸುವಾಗ ವೈದ್ಯರ ಬಗ್ಗೆ ಯೋಚಿಸಿ ಎಂದಿದ್ದಾರೆ. ಅಲ್ಲದೇ, ಇದನ್ನು ಓದುವ ಪ್ರತಿಯೊಬ್ಬರೂ ನಿಯಮಾವಳಿಗಳನ್ನು ಮುರಿಯಲು ಕಾರಣರಾಗಿದ್ದಾರೆ ಎಂದಿರುವ ಅವರು, ಹಿಂದೆಂದಿಗಿಂತಲೂ ಹೆಚ್ಚಾಗಿ ಭಾರತಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ರೋಲಿಗರು, ಕೋವಿಡ್ ವೇಳೆಯಲ್ಲಿ ತಮ್ಮ ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್ಗೆ ಹೋಗುತ್ತಿದ್ದ ನಿಮ್ಮ ಸೋದರ ಸಂಬಂಧಿಗೆ ಅದೇ ಮಾತನ್ನು ಹೇಳಿ ಎಂದು ಕಾಲೆಳೆದಿದ್ದಾರೆ.
ಇದೇ ರೀತಿ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾದ ನಿಮ್ಮ ಮಲ ಮಗಳು ಸಾರಾ ಅಲಿಖಾನ್ ಕೂಡಾ ಮಾಲ್ಡೀವ್ಸ್ನಲ್ಲಿ ಸುತ್ತಾಡಿ ಬಂದಿದ್ದಾಳೆ. ಅವಳಿಗೆ ಮನೆಯಲ್ಲಿರಲು ನೀವು ಹೇಳಿರಲಿಲ್ಲವೇ? ಎಂದು ಕುಟುಕಿದ್ದಾರೆ.
ನಿಮ್ಮ ಸೋದರಸಂಬಂಧಿ ರಣಬೀರ್ ಕಪೂರ್ ಹಾಗೂ ಅವನ ಗರ್ಲ್ ಫ್ರೆಂಡ್ ಆಲಿಯಾ ಭಟ್ ಬಗ್ಗೆ ಏನು ಹೇಳುತ್ತೀರಿ? ಮೊದಲು ಅವರಿಗೆ ನಿಮ್ಮ ಉಪದೇಶ ನೀಡಿ ಎಂದು ಜಾಡಿಸಿದ್ದಾರೆ.
ಓದಿ: ಸೆಲ್ಫಿಗಾಗಿ ಮಾಸ್ಕ್ ಕೆಳಗಿಳಿಸಿದ ಅಭಿಮಾನಿಗೆ ಸಾರಾ ಅಲಿ ಖಾನ್ ಮಾಡಿದ್ದೇನು?