ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರ ಯಶಸ್ವಿ ಪ್ರದರ್ಶನವಾಗ್ತಿದ್ದು, ಈ ವರ್ಷದ ಹಿಟ್ ಚಿತ್ರಗಳ ಲಿಸ್ಟ್ಗೆ ಸೇರಲಿದೆ. ಇದೇ ಸಕ್ಸಸ್ನ ಖುಷಿಯಲ್ಲೇ ನವರಸ ನಾಯಕ ಜಗ್ಗೇಶ್ 'ತೋತಾಪುರಿ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ತೋತಾಪುರಿ ಚಿತ್ರದ ಶೂಟಿಂಗ್ ತಲಕಾಡು ಬಳಿಯಿರುವ ಮುಡುಕುತೊರೆಯಲ್ಲಿ ನಡೆಯುತ್ತಿದೆ. ನಟ ಜಗ್ಗೇಶ್, ನಟಿ ಅಧಿತಿ ಪ್ರಭುದೇವ್ ಸೇರಿದಂತೆ ಬಹುತೇಕ ನಟರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಶೂಟಿಂಗ್ ನಡೆಯುತ್ತಿದ್ದ ವೇಳೆ ಜಗ್ಗೇಶ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದರು.
ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಾಗ ಕೋಪ ಮಾಡಿಕೊಳ್ಳದ ನವರಸನಾಯಕ ಪ್ರೀತಿಯಿಂದಲೇ ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು. ಅಲ್ಲದೆ ಅಭಿಮಾನಿಗಳ ಮೊಬೈಲ್ ತೆಗೆದುಕೊಂಡು ಅವರೇ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.
ತೋತಾಪುರಿ ಚಿತ್ರಕ್ಕೆ 'ನೀರ್ ದೋಸೆ' ನಿರ್ದೇಶಕ ವಿಜಯಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.