ETV Bharat / sitara

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ತೂತು ಮಡಿಕೆ'..ಶೀಘ್ರವೇ ಸಿನಿಮಾ ರಿಲೀಸ್ - Chandrakeerti direction Tootu madike

ಚಂದ್ರಕೀರ್ತಿ.ಎಂ ನಿರ್ದೇಶಿಸಿ ನಟಿಸಿರುವ 'ತೂತು ಮಡಿಕೆ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾ ಸೆಪ್ಟೆಂಬರ್​​ನಲ್ಲಿ ಬಿಡುಗಡೆಯಾಗಲಿದೆ.

Tootu madike movie is in post production
'ತೂತು ಮಡಿಕೆ'
author img

By

Published : Jun 12, 2020, 1:43 PM IST

ಯಾವುದೇ ಸಿನಿಮಾ ಆಗಲಿ ಜನರನ್ನು ಸೆಳೆಯಲು ಆ ಸಿನಿಮಾದ ಟೈಟಲ್ ಬಹಳ ಮುಖ್ಯ. ಇದನ್ನು ಸ್ಯಾಂಡಲ್​ವುಡ್ ಮಂದಿ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. 'ತೂತು ಮಡಿಕೆ' ಎಂಬ ಟೈಟಲ್ ಹೊಂದಿರುವ ಸಿನಿಮಾವೊಂದು ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ.

'ತೂತು ಮಡಿಕೆ' ಕಾಮಿಡಿ ಹಾಗೂ ಥ್ರಿಲ್ಲರ್ ಸಿನಿಮಾ. ಇದು ಒಂದು ವಸ್ತುವಿನ ಸುತ್ತ ಹೆಣೆದಿರುವ ಚಿತ್ರ. ಅದು ಏನು ಎಂಬುದನ್ನು ನೀವು ಥಿಯೇಟರ್​​​ನಲ್ಲಿ ಸಿನಿಮಾ ನೋಡಿ ತಿಳಿದುಕೊಳ್ಳಬೇಕು ಎನ್ನುತ್ತಾರೆ ನಿರ್ದೇಶಕ ಚಂದ್ರಕೀರ್ತಿ ಎಂ. ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ಕಳೆದ ವರ್ಷ ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಈ ಸಿನಿಮಾವನ್ನು ಒಂದು ಡೀಲ್ ಕುರಿತಾಗಿ ಹೆಣೆಯಲಾಗಿದೆಯಂತೆ. ಚಿತ್ರವನ್ನು ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಮಂತ್ರಿಯ ಆಪ್ತ ಸಹಾಯಕನಾಗಿ ಪ್ರಮೋದ್ ಶೆಟ್ಟಿ, ಸ್ಲಮ್ ಹುಡುಗ ಆಗಿ ಚಂದ್ರಕೀರ್ತಿ. ಎಂ, ನಾಯಕಿಯಾಗಿ ಪಾವನ ನಟಿಸಿದ್ದಾರೆ. ಇವರೊಂದಿಗೆ ಉಗ್ರಂ ಮಂಜು, ಶಂಕರ್ ಅಶ್ವತ್ಥ್​​​​​, ಗಿರೀಶ್​​ ಶಿವಣ್ಣ, ನಂದಗೋಪಾಲ್, ಅರುಣ್ ಮೂರ್ತಿ, ಸಿತಾರಾ, ರಾಘವೇಂದ್ರ. ಎನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಸ್ವಯಂನಾಥನ್ ಆರ್.ಕೆ. ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಡೆಯಾಗಿದ್ದು ಸೆಪ್ಟೆಂಬರ್​​​ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.