2 ತಿಂಗಳ ಹಿಂದೆ ಮೀಸೆ ತೆಗೆಸಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಸುದ್ದಿಯಾಗಿದ್ದ ಮೆಗಾಸ್ಟಾರ್ ಚಿರಂಜೀವಿ ನಾಲ್ಕು ದಿನಗಳ ಹಿಂದೆ ತಲೆ ಕೂದಲು ತೆಗೆಸಿರುವ ಫೋಟೋವನ್ನು ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ಚಿರು ಹೊಸ ಅವತಾರ ನೋಡಿದ ಅಭಿಮಾನಿಗಳು ಮುಂದಿನ ಚಿತ್ರಕ್ಕಾಗಿ ಚಿರಂಜೀವಿ ಕೂದಲು ತೆಗೆಸಿರಬಹುದು ಎಂದು ಕಮೆಂಟ್ ಮಾಡಿದ್ದರೆ, ಚಿರು ಪುತ್ರ ರಾಮ್ಚರಣ್ ತೇಜ ಅಪ್ಪನ ಹೊಸ ಲುಕ್ ನೋಡಿ ಶಾಕ್ ಆಗಿದ್ದರು. ನಾನು ನೋಡುತ್ತಿರುವುದು ನಿಜಾನಾ..? ಎಂದು ಚರಣ್ ಕೂಡಾ ಕಮೆಂಟ್ ಮಾಡಿದ್ದರು. ಇದೀಗ ಚಿರು ತಮ್ಮ ಬೋಳುತಲೆಯ ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದು ಚಿರು ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಮಾಡಲಾದ ಟ್ರಯಲ್ ಲುಕ್. ಇದನ್ನು ಅರ್ಬನ್ ಮಾಂಕ್ ಸ್ಟೈಲ್ ಎಂದು ಕರೆಯುತ್ತಾರೆ. ಚಿರಂಜೀವಿ ಈ ಫೋಟೋ ಅಪ್ಲೋಡ್ ಮಾಡಿದ್ದೇ ತಡ ಈ ಫೋಟೋ ಭಾರೀ ವೈರಲ್ ಆಗಿತ್ತು. ನೆಟಿಜನ್ಗಳಂತೂ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಆದರೆ ಈಗ ಈ ಸ್ಟೈಲ್ ಹಿಂದಿನ ರಹಸ್ಯ ಬದಲಾಗಿದೆ. ಅಸಲಿಗೆ ಮೆಗಾಸ್ಟಾರ್ ಕೂದಲು ತೆಗೆಸಿಲ್ಲ. ಇದು ಮೇಕಪ್ ಅಷ್ಟೇ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಚಿರಂಜೀವಿ, "ನೋಡಿದ ಕೂಡಲೇ ಇದು ನಿಜವಾದ ಲುಕ್ ಎನ್ನಿಸುವಷ್ಟರ ಮಟ್ಟಿಗೆ ಮೇಕ್ ಓವರ್ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಸಿನಿಮಾ ಮ್ಯಾಜಿಕ್ಗೆ ನನ್ನ ಸೆಲ್ಯೂಟ್" ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ 'ಆಚಾರ್ಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ 'ಲೂಸಿಫರ್', 'ವೇದಾಳಂ' ರಿಮೇಕ್ನಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಆದರೆ ಈ ಅರ್ಬನ್ ಮಾಂಕ್ ಲುಕ್ ಯಾವ ಚಿತ್ರಕ್ಕೆ ಎಂಬುದನ್ನು ತಿಳಿಯಲು ಇನ್ನೂ ಸ್ವಲ್ಪ ದಿನಗಳು ಕಾಯಬೇಕು.