ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಅಲಾ ವೈಕುಂಠಪುರಮುಲೋ ಸಿನಿಮಾ ಬಳಿಕ ಸ್ಟೈಲಿಷ್ ಸ್ಟಾರ್ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ. ಟ್ರೈಲರ್ ಮತ್ತು ಹಾಡುಗಳಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರೋ ಪುಷ್ಪ ಸಿನಿಮಾ ನಾಳೆ ತೆರೆಗೆ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ಕನ್ನಡದ ನಟ ಡಾಲಿ ಧನಂಜಯ್ ಈಗಾಗಲೇ, ಹೈದರಾಬಾದ್, ಚೆನ್ನೈನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್ಗಾಗಿ ಸ್ಟೈಲಿಷ್ ಸ್ಟಾರ್ ಸೇರಿದಂತೆ ಚಿತ್ರದ ತಾರಾಬಳಗ ಬೆಂಗಳೂರಿಗೆ ಬಂದಿದ್ದರು.
ಈ ವೇಳೆ ಮಾತನಾಡಿದ ನಟ ಅಲ್ಲು ಅರ್ಜುನ್ ಮೊದಲಿಗೆ ಬೆಂಗಳೂರು ಜೊತೆಗಿನ ಒಡನಾಟ ಹಂಚಿಕೊಂಡರು. ಯಾಕಂದ್ರೆ ಅಲ್ಲು ಅರ್ಜುನ್ 18 ವರ್ಷದವರಿದ್ದಾಗ ಅಭಿನಯಿಸಿದ ಸಿನಿಮಾವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಕನ್ನಡಿಗರು ತುಂಬಾ ಚೆನ್ನಾಗಿ ರಿಸೀವ್ ಮಾಡಿಕೊಂಡಿದ್ದರು ಅಂತಾ ಬೆಂಗಳೂರಿನ ಕನೆಕ್ಷನ್ ಬಗ್ಗೆ ಮಾತನಾಡಿದರು.
ಪುಷ್ಪ ಇದೇ 17ಕ್ಕೆ ಬಿಡುಗಡೆ ಆಗಲಿರುವ ಬಗ್ಗೆ ಎಕ್ಸೈಟ್ ಆಗಿರುವ ಅಲ್ಲು ಅರ್ಜುನ್ ಸಿನಿಮಾದ ಒಂದು ಸ್ಟೈಲ್ ವೇದಿಕೆ ಮೇಲೆ ಮಾಡಿ ತೋರಿಸಿದರು. ಇಷ್ಟು ದಿನ ನಾನ್ ಬಟ್ಟೆ ಕಾಲರ್ ಬಗ್ಗೆ ಅಭಿಮಾನಿಗಳು ಇಷ್ಟ ಪಡುತ್ತಿದ್ದರು. ಇನ್ಮುಂದೆ ಪುಷ್ಪ ಎಡಗೈ ಸ್ಟೈಲ್ ಅನ್ನು ಅಭಿಮಾನಿಗಳು ಅನುಕರಣೆ ಮಾಡ್ತಾರೆ ಅಂತ ಹೇಳಿ, 'ಲೇ ಮಗ ಇದು ನನ್ನ ಜಾಗ' ಅಂತಾ ಕನ್ನಡದಲ್ಲಿ ಬೊಂಬಾಟ್ ಡೈಲಾಗ್ ಹೊಡೆದರು.
ಇದನ್ನೂ ಓದಿ: ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಗೆದ್ದಿಲ್ಲ ಟೆಸ್ಟ್ ಸರಣಿ.. ಕೊಹ್ಲಿ ಪಡೆ ನಿರ್ಮಿಸುತ್ತಾ ಹೊಸ ಇತಿಹಾಸ?
ಇದರ ಜೊತೆಗೆ ಡಾಲಿ ಧನಂಜಯ್ ಕೂಡ ಪುಷ್ಪ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದ್ದಾರೆ. ಧನಂಜಯ್ ನಟನೆ ಬಗ್ಗೆ ಹೊಗಳಿದ್ದಲ್ಲದೇ, ನಾಯಕಿ ರಶ್ಮಿಕಾ ಮಂದಣ್ಣ ಅವರ ಬೆಳಣಿಗೆ ಬಗ್ಗೆಯೂ ಅಲ್ಲು ಅರ್ಜುನ್ ಹೊಗಳಿದರು. ರಶ್ಮಿಕಾ ಮಂದಣ್ಣ ಕನ್ನಡದ ಹುಡುಗಿಯಾಗಿ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎಂದರು.
ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಪುಷ್ಪ ಚಿತ್ರವನ್ನು ನಿರ್ದೇಶಿಸಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಲಂ ಚಿತ್ರದ ನಂತರ ಅವರು ನಿರ್ದೇಶಿಸಿದ ಚಿತ್ರ ಇದಾಗಿದೆ. ಪುಷ್ಪ ಚಿತ್ರ ಕಾಡಿನ ಹಿನ್ನೆಲೆ ಹೊಂದಿದ್ದು, ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.