ETV Bharat / sitara

ಐಶಾರಾಮಿ ವ್ಯಾನ್​ ಮೇಲೆ ಪೊಲೀಸ್ ಕಣ್ಣು... ನಟ ಅಲ್ಲು ಅರ್ಜುನ್​ಗೆ ಶಾಕ್

author img

By

Published : Jul 26, 2019, 11:03 AM IST

ಸಂಚಾರಿ ನಿಮಯ ಉಲ್ಲಂಘಿಸಿದ ಟಾಲಿವುಡ್​ ನಟ ಅಲ್ಲು ಅರ್ಜುನ್​​ಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ.

ಚಿತ್ರಕೃಪೆ: ಟ್ವಿಟರ್​

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್​​ಗೆ ಕೂಲಿಂಗ್ ಪೇಪರ್​​ನ ಟಿಂಟೆಡ್ ಗ್ಲಾಸ್ ಬಳಲಾಗಿದೆ. ಸಂಚಾರಿ ನಿಯಮದ ಪ್ರಕಾರ ಟಿಂಟೆಡ್ ಗ್ಲಾಸ್​​ಗಳನ್ನು ಬಳಸುವಂತಿಲ್ಲ. ಆದರೆ, ಈ ನಿಯಮವನ್ನು ಅಲ್ಲು ಮುರಿದ್ದಾರೆ.

ಈ ಬಗ್ಗೆ ಇದೇ ತಿಂಗಳು 16 ರಂದು ಮೊಹಮ್ಮದ್ ಅಬ್ದುಲ್ ಅಜಂ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು. ಹಿಮಾಯತ್ ನಗರದಲ್ಲಿ ಸಂಚರಿಸುತ್ತಿದ್ದ ವ್ಯಾನ್​ ಪೋಟೊ ಸಮೇತ ಸೈಬರ್​ ಠಾಣೆಗೆ ದೂರು ಕೊಟ್ಟಿದ್ದರು. ಇದನ್ನು ಪರಿಗಣಿಸಿರುವ ಪೊಲೀಸರು ಅಲ್ಲು ಅರ್ಜುನ್ ಮನೆಗೆ ₹735 ದಂಡದ ಚಲನ್ ಕಳುಹಿಸಿದ್ದಾರೆ.

ಇದೇ ತಿಂಗಳ ಮೊದಲ ವಾರದಲ್ಲಿ ಅಲ್ಲು FALCON ಕಂಪನಿಯ ದುಬಾರಿ ಮೊತ್ತದ ಲೇಟೆಸ್ಟ್ ಡಿಸೈನ್​​ನ ವ್ಯಾನಿಟಿ ವ್ಯಾನ್ ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ ₹6 ಕೋಟಿ. ಹೊಸ ವಾಹನದ ಖರೀದಿ ಖುಷಿಯಲ್ಲಿರುವ ಅಲ್ಲು ಅರ್ಜುನ್​ಗೆ ಹೈದರಾಬಾದ್​ನ ಪೊಲೀಸರು ಆಘಾತ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.