ತೆಲುಗು ಮತ್ತು ಕನ್ನಡ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಇಂದು 25ರ ಜನ್ಮದಿನದ ಖುಷಿ.
-
Anandddddddaaaaaaa.! 🤍 thankyou!
— Rashmika Mandanna (@iamRashmika) April 4, 2021 " class="align-text-top noRightClick twitterSection" data="
Haven’t seen you in forever.. I hope you are well.. we’ll party ones I am back! 🤍 thankyou baba. 🤍@ananddeverkonda https://t.co/MToFhBhuFA
">Anandddddddaaaaaaa.! 🤍 thankyou!
— Rashmika Mandanna (@iamRashmika) April 4, 2021
Haven’t seen you in forever.. I hope you are well.. we’ll party ones I am back! 🤍 thankyou baba. 🤍@ananddeverkonda https://t.co/MToFhBhuFAAnandddddddaaaaaaa.! 🤍 thankyou!
— Rashmika Mandanna (@iamRashmika) April 4, 2021
Haven’t seen you in forever.. I hope you are well.. we’ll party ones I am back! 🤍 thankyou baba. 🤍@ananddeverkonda https://t.co/MToFhBhuFA
ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷವಾಯ್ತು. ಇಷ್ಟು ಕಡಿಮೆ ಸಮಯದಲ್ಲಿ ಈಕೆ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ಪುನೀತ್ ರಾಜ್‌ಕುಮಾರ್, ಗಣೇಶ್, ದರ್ಶನ್, ನಾಗಶೌರ್ಯ, ಮಹೇಶ್ ಬಾಬು, ನಿತಿನ್, ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ ಜೊತೆ ನಟಿಸಿದ್ದಾರೆ.
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ತಮಿಳಿನ ಕಾರ್ತಿ, ಧ್ರುವ ಸರ್ಜಾ ಜೊತೆಯೂ ಈ ಬೆಡಗಿ ತೆರೆ ಹಂಚಿಕೊಂಡಿದ್ದಾರೆ. ಈಗ ಬಾಲಿವುಡ್ ಸ್ಟಾರ್ಗಳಾದ ಅಮಿತಾಬ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
2012ರಲ್ಲಿ ಮಾಡೆಲಿಂಗ್ ಆರಂಭಿಸಿದ ರಶ್ಮಿಕಾ 'ಕ್ಲೀನ್ ಆ್ಯಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ' ಎಂಬ ಹೆಗ್ಗಳಿಕೆಗೆ ಭಾಜನರಾದರು. 2013ರ ಟಿವಿಸಿ ಲಾಮೋಡ್ ಬೆಂಗಳೂರಿನ ಟಾಪ್ ಮಾಡೆಲ್‌ಗಳಲ್ಲಿಯೂ ಒಬ್ಬರಾದರು.

2016ರಲ್ಲಿ ಕನ್ನಡದಲ್ಲಿ ಮೊದಲು ಸಿನಿಮಾ ಮಾಡಿದ ರಶ್ಮಿಕಾ 2018ರಲ್ಲಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2019ರಲ್ಲಿ ತಮಿಳು ಸಿನಿ ರಂಗಕ್ಕೂ ಕಾಲಿಟ್ಟರು. ಈ ಹಿಂದೆ ಬಾಲಿವುಡ್‌ಗೆ ಹೋಗುವ ಅವಕಾಶ ಬಂದಿದ್ದರೂ ಕೂಡ ಒಪ್ಪಿಕೊಂಡಿರಲಿಲ್ಲ. ಈಗ ‘ಗುಡ್ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಜನ್ಮದಿನ ಹಿನ್ನೆಲೆಯಲ್ಲಿ ಚಿತ್ರರಂಗದ ನಟ-ನಟಿಯರು, ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.