ETV Bharat / sitara

ಕಾಲ್ನಡಿಗೆಯಲ್ಲಿ ತೆರಳಿ ಸೋನು ಸೂದ್​ ಭೇಟಿಯಾದ ಅಭಿಮಾನಿ.. ಭಾವುಕರಾದ ಸೂದ್​

ವೆಂಕಟೇಶ್​ ಹರಿಜನ್​ ಎಂಬಾತ ಸೋನು ಸೂದ್​ ಭೇಟಿಗೆಂದು ಕಾಲ್ನಡಿಗೆ ಮೂಲಕ ತೆಲಂಗಾಣದಿಂದ ಮುಂಬೈಗೆ ತೆರಳಿದ್ದಾನೆ. ಇನ್ನು ಈತ ಗುರುವಾರದಂದು ಸೋನು ಸೂದ್​ ಅವರನ್ನು ಭೇಟಿ ಮಾಡಿದ್ದಾನೆ. ಈ ಬಳಿಕ ಮಾತನಾಡಿದ ನಟ, ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ಭೇಟಿಯಾಗಲು ಬರುವ ಅಭಿಮಾನಿಗಳು ಕಷ್ಟ ತೆಗೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

author img

By

Published : Jun 11, 2021, 5:41 PM IST

Updated : Jun 11, 2021, 5:51 PM IST

Hyderabad to Mumbai
ಸೋನುರನ್ನು ಭೇಟಿಯಾದ ಅಭಿಮಾನಿ

ಹೈದರಾಬಾದ್: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ನಟ ಸೋನು ಸೂದ್​ ಮಾಡುತ್ತಿರುವ ಸಾಮಾಜಿಕ ಕಾರ್ಯದಿಂದ ಅಭಿಮಾನಿ ಬಳಗ ಹೆಚ್ಚಾಗಿದೆ. ಇನ್ನು ಸಂಕಷ್ಟದಲ್ಲಿ ಸಹಾಯ ಮಾಡುತ್ತಿರುವ ನೆಚ್ಚಿನ ನಟನಿಗೆ ಧನ್ಯವಾದ ಸಲ್ಲಿಸಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ.

ಇನ್ನು ಸಹಾಯದ ನಿರೀಕ್ಷೆಯೊಂದಿಗೆ ಸೋನು ಸೂದ್​ ಅವರನ್ನು ಭೇಟಿಯಾಗಲು ತೆಲಂಗಾಣದ ವೆಂಕಟೇಶ್​ ಹರಿಜನ್​ ಎಂಬ ಯುವಕ ಕಾಲ್ನಡಿಗೆ ಮೂಲಕ ತೆರಳಿದ್ದ. ಆತ ಗುರುವಾರದಂದು ಮುಂಬೈ ತಲುಪಿದ್ದು, ಈ ಚಿತ್ರವನ್ನು ಇನ್​ಸ್ಟಾಗ್ರಾಂ ಮೂಲಕ ಸೋನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸೂದ್​ "ವೆಂಕಟೇಶ್ ಇಲ್ಲಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಮಾಡಲು ನಾನು ಪ್ರಯತ್ನ ಮಾಡುತ್ತಿದ್ದರೂ ಆತ ಹೈದರಾಬಾದ್​ನಿಂದ ಮುಂಬೈಗೆ ನನ್ನನ್ನು ಭೇಟಿಯಾಗಲು ಕಾಲ್ನಡಿಗೆ ಮೂಲಕ ಬಂದಿದ್ದಾನೆ. ಅವನು ನಿಜವಾಗಿಯೂ ಸ್ಪೂರ್ತಿದಾಯಕ ಮತ್ತು ನನ್ನನ್ನು ಅಪಾರವಾಗಿ ವಿನಮ್ರಗೊಳಿಸಿದ್ದಾನೆ " ಎಂದಿದ್ದಾರೆ.

ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ಭೇಟಿಯಾಗಲು ಬರುವ ಅಭಿಮಾನಿಗಳು ಕಷ್ಟ ತೆಗೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸುಮಾರು 16-18 ರಾಜ್ಯಗಳಲ್ಲ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದಾಗಿ ಸೂದ್ ಘೋಷಿಸಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಮತ್ತು ಕರ್ನೂಲ್ ನಗರಗಳ ಎರಡು ಸ್ಥಳಗಳಲ್ಲಿ ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆಯು ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಸೆಪ್ಟೆಂಬರ್ ವೇಳೆಗೆ ಎಲ್ಲ ರಾಜ್ಯಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

Last Updated : Jun 11, 2021, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.