ETV Bharat / sitara

ಮೂವರು ಚೆಂದುಳ್ಳಿ ಚೆಲುವೆಯರ ಜೊತೆ 'ಶುಗರ್​ ಫ್ಯಾಕ್ಟರಿ'ಯಲ್ಲಿ ಡಾರ್ಲಿಂಗ್ ಕೃಷ್ಣ!

author img

By

Published : Feb 15, 2021, 12:11 PM IST

Updated : Feb 15, 2021, 12:59 PM IST

ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ,'ಶುಗರ್ ಫ್ಯಾಕ್ಟರಿ' ಚಿತ್ರದ ಮೊದಲ ಲುಕ್ ರಿವೀಲ್ ಆಗಿದೆ. ಮೂರು ಜನ ನಾಯಕಿಯಾರಾದ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ಜೊತೆ ಡಾರ್ಲಿಂಗ್ ಕೃಷ್ಣ ಮಿಂಚಿದ್ದಾರೆ.

three heroins in sugar factory movie
ಶುಗರ್​ ಫ್ಯಾಕ್ಟರಿ

ಬೆಂಗಳೂರು: ಪ್ರೇಮಿಗಳ ದಿನದೊಂದು ಹೊಸ ಬಾಳಿಕೆ ಕಾಲಿಟ್ಟಿರೋ, ಡಾರ್ಲಿಂಗ್ ಕೃಷ್ಣನಿಗೆ, ಮದುವೆ ದಿನ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಶುಗರ್​ ಫ್ಯಾಕ್ಟರಿ ಮೊದಲ ಲುಕ್ ರಿವೀಲ್

ಲವ್ ಮಾಕ್​ಟೈಲ್ ಚಿತ್ರದ ಸಕ್ಸಸ್ ಬಳಿಕ, ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ‌. ಸದ್ಯ ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ,'ಶುಗರ್ ಫ್ಯಾಕ್ಟರಿ' ಚಿತ್ರದ ಮೊದಲ ಲುಕ್ ರಿವೀಲ್ ಆಗಿದೆ. ಮೂರು ಜನ ನಾಯಕಿಯಾರಾದ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ಜೊತೆ ಡಾರ್ಲಿಂಗ್ ಕೃಷ್ಣ ಮಿಂಚಿದ್ದಾರೆ.

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶನದ, ಶುಗರಿ ಫ್ಯಾಕ್ಟರಿ ಚಿತ್ರಕ್ಕಾಗಿ ಸಣ್ಣ ಪೋಸ್ಟರ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ‌. ಸದ್ಯ ಬೆಂಗಳೂರು ಸುತ್ತಮುತ್ತ 12ದಿನಗಳ ಕಾಲ ಶುಗರ್ ಫ್ಯಾಕ್ಟರಿ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.

ಡಾರ್ಲಿಂಗ್ ಕೃಷ್ಣ, ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ಜೊತೆಗೆ ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿ ಗೋವಿಂದೇ ಗೌಡ, ಸೂರಜ್, ಮಹಾಂತೇಶ್(ಹೊಸ ಪರಿಚಯ), ಪವನ್ ಎಸ್ ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತು ರಾಯ್, D.J.ವಿಂಪಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಚಿತ್ರದಲ್ಲಿ ಏಳು ಹಾಡುಗಳಿರಲಿದ್ದು, ಚೇತನ್ ಕುಮಾರ್ , ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿರುವ 'ಶುಗರ್ ಫ್ಯಾಕ್ಟರಿ' ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ಇನ್ನು ಮಾರ್ಚ್ ಎರಡನೇ ವಾರ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ಆರಂಭವಾಗಲಿದೆ.‌ ಮಾತಿನ‌‌ ಭಾಗ ಹಾಗೂ ಹಾಡಿನ ಚಿತ್ರೀಕರಣ ನಡೆಯಲಿದೆ.

Last Updated : Feb 15, 2021, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.