ETV Bharat / sitara

ಅ.15 ರಿಂದ ಥಿಯೇಟರ್​​​ಗಳು ಓಪನ್​​​​...ಚಿತ್ರಮಂದಿರಗಳ ಮಾಲೀಕರು ಹೇಳೋದೇನು....? - 5th step lockdown release

6 ತಿಂಗಳ ಬಳಿಕ ಕೊನೆಗೂ ಅಕ್ಟೋಬರ್ 15 ರಿಂದ ದೇಶಾದ್ಯಂತ ಥಿಯೇಟರ್​​​​​​​ಗಳು ಓಪನ್ ಆಗಲಿವೆ. ಆದರೆ ಬಸ್, ಮಾಲ್, ಹೋಟೇಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಜನರ ಸಂಚಾರ ಕಡಿಮೆ ಆಗಿರುವಾಗ ಜನರು ಥಿಯೇಟರ್​​​​​​ಗೆ ಬಂದು ಸಿನಿಮಾ ನೋಡುವುದು ಅನುಮಾನ ಎಂದು ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಹೇಳಿದ್ದಾರೆ.

Theatres re open
ಚಿತ್ರಮಂದಿರಗಳು ರೀ ಓಪನ್
author img

By

Published : Oct 1, 2020, 3:03 PM IST

ಕೊರೊನಾ ಭೀತಿಯಿಂದಾಗಿ ಮಾರ್ಚ್​ ತಿಂಗಳಲ್ಲಿ ಬಂದ್ ಆದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅಕ್ಟೋಬರ್ 15 ರಿಂದ 5ನೇ ಹಂತದ ಲಾಕ್​​​​ಡೌನ್ ತೆರವು ಆಗಲಿದ್ದು ಅಂದಿನಿಂದ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ.

ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್

ಚಿತ್ರಮಂದಿರದ ಮಾಲೀಕರಿಗೆ ಈ ವಿಚಾರ ಸಮಾಧಾನ ತಂದಿದ್ದು ಕಳೆದ 6 ತಿಂಗಳಿಂದ ಧೂಳು ತುಂಬಿರುವ ಥಿಯೇಟರ್​ಗಳನ್ನು ಕ್ಲೀನ್ ಮಾಡಬೇಕಿದೆ. ಅಲ್ಲದೆ ಕೇಂದ್ರ ಸರ್ಕಾರದ ಕೋವಿಡ್​-19 ನಿಯಮದ ಪ್ರಕಾರ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕಿದೆ. ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಈ ಬಗ್ಗೆ ಮಾತನಾಡಿರುವ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್​​​​​​, ಚಿತ್ರಮಂದಿರಗಳನ್ನು ತೆರೆಯಲು ಕೆಲವೊಂದು ನಿಬಂಧನೆಗಳಿವೆ. ಇದನೆಲ್ಲಾ ಗಮನದಲ್ಲಿಟ್ಟುಕೊಂಡು ಚಿತ್ರಮಂದಿರಗಳ ಮಾಲೀಕರ ಜೊತೆ, ನಿರ್ಮಾಪಕರ ಜೊತೆ, ವಿತರಕರ ಜೊತೆ ಹಾಗೂ ಬೇರೆ ರಾಜ್ಯದ ನಿರ್ಮಾಪಕರೊಂದಿಗೆ ಚರ್ಚಿಸಬೇಕು. ನಂತರ ಸಿನಿಮಾಗಳನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

Theatres re open
ನವರಂಗ್ ಚಿತ್ರಮಂದಿರ

ಅಕ್ಟೋಬರ್ 15‌ ರಂದು ಚಿತ್ರಮಂದಿರಗಳು ಓಪನ್ ಆದಾಗ ಮತ್ತೆ ಹಳೆಯ ಸಿನಿಮಾಗಳು ರಿಲೀಸ್ ಆಗಲಿವೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್, ಕೊರೊನಾ ಸಮಯದಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರ ಪ್ರದರ್ಶನಗೊಂಡಿದ್ದ ಸಿನಿಮಾಗಳು ರೀ ರಿಲೀಸ್ ಆಗುವ ಸಾಧ್ಯತೆ ಇದೆ. ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ, ರಕ್ಷ್​ ಹಾಗೂ ಶುಭ ಪೂಂಜಾ ಅಭಿನಯದ ನರಗುಂದ ಬಂಡಾಯ, ದಿಯಾ ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

Theatres re open
ಸುದೀಪ್ ಅಭಿನಯದ 'ಕೋಟಿಗೊಬ್ಬ 3'

ಇನ್ನು ಸ್ಟಾರ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಸುದೀಪ್ ಅಭಿನಯದ ಕೋಟಿಗೊಬ್ಬ 3, ದರ್ಶನ್ ನಟನೆಯ ರಾಬರ್ಟ್‌, ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿರುವ ಸಲಗ, ಶರಣ್ ಅಭಿನಯದ ಅವತಾರ ಪುರುಷ, ಧ್ರುವ ಸರ್ಜಾ ಅಭಿನಯದ ಪೊಗರು ಬಿಡುಗಡೆಯಾಗಲು ಸಾಲಿನಲ್ಲಿ ನಿಂತಿವೆ. ಆದರೆ ಹೊಟೇಲ್, ಮಾಲ್, ಬಸ್​​​​​​​​​​​​​​ಗಳಲ್ಲಿ ಜನರು ಸಂಚರಿಸುವುದು ಕಡಿಮೆ ಆಗಿರುವಾಗ, ಚಿತ್ರಮಂದಿರಗಳು ತೆರೆದಾಗ ಪ್ರೇಕ್ಷಕರು ಬರಲಿದ್ದಾರಾ ಎನ್ನುವುದು ಪ್ರಶ್ನೆಯಾಗಿದೆ. ಇದರ ಜೊತೆಗೆ ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿರುವ ನಿರ್ಮಾಪಕರು ಈ ಸಮಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರಾ ಎಂಬುದು ಅನುಮಾನ ಎಂದು ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Theatres re open
ದರ್ಶನ್ ಅಭಿನಯದ 'ರಾಬರ್ಟ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.