ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ‘ಪ್ರಾರಂಭ’ ಚಿತ್ರೀಕರಣ ಅಂತ್ಯಗೊಂಡಿದೆ. ಮನೋರಂಜನ್ ಅಭಿನಯದ ಮೂರನೇ ಸಿನಿಮಾ ಇದು. ಸಾಹೇಬ ಮತ್ತು ಬೃಹಸ್ಪತಿ ನಂತರ ಅಭಿನಯಿಸಿರುವ ಸಿನಿಮಾಕ್ಕೆ ಕೀರ್ತಿ ಕಳಕೇರಿ ನಾಯಕಿ. ಸೂರಜ್, ಹನುಮಂತೇಗೌಡ, ಕಡ್ಡಿ ಪುಡಿ ಚಂದ್ರು ಹಾಗೂ ಇತರರು ತಾರಗಣದಲ್ಲಿದ್ದಾರೆ.

‘ಪ್ರಾರಂಭ’ ಗೋವಾ, ಮೂಡಿಗೆರೆ, ಮೈಸೂರು, ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾ. ನಾಯಕ ಮನೋರಂಜನ್ ಮೂರು ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದಿನ ಯುವಕರ ಲೈಫ್ ಸ್ಟೈಲ್ ಸಹ ಇದರಲ್ಲಿ ಅಡಕವಾಗಿದೆ.
ಕಥೆ, ಚಿತ್ರಕಥೆ ಬರೆದು ಮನು ಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಜಗದೀಶ್ ಕಲ್ಯಾಡಿ ಜೇನುಶ್ರೀ ತನುಷ ಪ್ರೊಡಕ್ಷನ್ ಅಡಿ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಪೈ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸಂತೋಷ್ ನಾಯಕ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ಎರಡು ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಬಾಬು ಛಾಯಾಗ್ರಹಣ ಜಿ.ಎನ್. ಕುಮಾರ್ ಸಂಕಲನ ಮಾಡಿರುವ ‘ಪ್ರಾರಂಭ’ ಸಿನಿಮಾ ನವೆಂಬರ್ ತಿಂಗಳಿನಲ್ಲಿ ತೆರೆ ಮೇಲೆ ಬರಲಿದೆ.