ETV Bharat / sitara

ಕನ್ನಡದಲ್ಲಿ ಬರ್ತಾ ಇದೆ ತಮಿಳು ನಟ‌ ಸಿಂಬು ನಟನೆಯ 'ದಿ‌ ಲೂಪ್' ಸಿನಿಮಾ..

ಪೊಲಿಟಿಕಲ್ ಡ್ರಾಮ ಕತೆ ಹೊಂದಿರುವ ಚಿತ್ರಕ್ಕೆ ರಚನೆ ಬರೆದು ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ. ಸಿಲಂಬರಸನ್ ಟಿ. ಆರ್ ಈ ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಬು ಜೋಡಿಯಾಗಿ ಕಲ್ಯಾಣಿ ಪ್ರಿಯದರ್ಶನ್ ಮಿಂಚಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್ ಜೆ ಸೂರ್ಯ ಉಳಿದಂತೆ ವೈ ಜಿ ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್ ಎ ಚಂದ್ರಶೇಖರ್, ಉದಯ, ಮನೋಜ್ ಕೆ ಭಾರತಿ, ಪ್ರೇಮ್‌ಗಿಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ..

loop-cinema
ದಿ‌ ಲೂಪ್
author img

By

Published : Oct 4, 2021, 4:23 PM IST

Updated : Oct 4, 2021, 5:21 PM IST

ಸೌತ್ ಸಿನಿಮಾ ಇಂಡಸ್ಟ್ರಿ ಅಲ್ಲದೇ ಹಿಂದಿ, ಇಂಗ್ಲಿಷ್ ಭಾಷೆಯ ಬಹು ನಿರೀಕ್ಷೆಯ ಸಿನಿಮಾಗಳು ಕನ್ನಡದಲ್ಲೂ ಬಿಡುಗಡೆ ಆಗುವ ಸಂಸ್ಕೃತಿ ಶುರುವಾಗಿದೆ. ಇದೀಗ ತಮಿಳು ನಟ ಸಿಂಬು ಅಭಿನಯದ ಮಾನಡು ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗಿದೆ‌.

ಈ ಹಿಂದೆ‌ ಈ ಸಿನಿಮಾದ ಪೋಸ್ಟರ್​ ಅನ್ನು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ ಆರ್ ರೆಹಮಾನ್, ಹಿಂದಿಯಲ್ಲಿ ಅನುರಾಗ್‌ ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್‌ ಅನ್ನು ಲೋಕಾರ್ಪಣೆ ಮಾಡಿದ್ದರು. ನಂತರ ಚಿತ್ರತಂಡವು ಕನ್ನಡದಲ್ಲಿ ಬೇರೆ ಟೈಟಲ್ ಇಡುವುದಾಗಿ ಹೇಳಿಕೊಂಡಿತ್ತು. ಇದೀಗ ಕನ್ನಡದಲ್ಲಿ 'ದಿ ಲೂಪ್‌' ಎಂದು ಟೈಟಲ್ ಇಡಲಾಗಿದ್ದು, ಕನ್ನಡ ವರ್ಷನ್ ಟ್ರೇಲರ್ ಅನ್ನು ಅನಾವರಣ ಮಾಡಲಾಗಿದೆ.

ಪೊಲಿಟಿಕಲ್ ಡ್ರಾಮ ಕತೆ ಹೊಂದಿರುವ ಚಿತ್ರಕ್ಕೆ ರಚನೆ ಬರೆದು ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ. ಸಿಲಂಬರಸನ್ ಟಿ. ಆರ್ ಈ ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಬು ಜೋಡಿಯಾಗಿ ಕಲ್ಯಾಣಿ ಪ್ರಿಯದರ್ಶನ್ ಮಿಂಚಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್ ಜೆ ಸೂರ್ಯ ಉಳಿದಂತೆ ವೈ ಜಿ ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್ ಎ ಚಂದ್ರಶೇಖರ್, ಉದಯ, ಮನೋಜ್ ಕೆ ಭಾರತಿ, ಪ್ರೇಮ್‌ಗಿಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ರಿಚರ್ಡ್ ಛಾಯಾಗ್ರಹಣವಿದ್ದು, ಎಂ ನಾಥನ್, ಸಂಕಲನ ಪ್ರವೀಣ್ ಕೆ ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದ್ದಾಗಿದೆ. ಸುರೇಶ್‌ ಕಾಮತ್‌ ಅವರು ವಿ ಹೌಸ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿರುವುದು ವಿಶೇಷ.

  • " class="align-text-top noRightClick twitterSection" data="">

ಇದೀಗ ಮಾನಡು ಸಿನಿಮಾ ಟ್ರೈಲರ್‌ ಅನ್ನು ಆಯಾ ಭಾಷೆಯಲ್ಲಿ ಸ್ಟಾರ್ ನಟರು ಬಿಡುಗಡೆ ಮಾಡಿದ್ದಾರೆ. ಅಂದ ಹಾಗೆ 'ದಿ ಲೂಪ್' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲು ಸಜ್ಜಾಗಿದೆ. ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು, ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಸದ್ಯ ನಟ ಸಿಲಂಬರಸನ್ ಟಿ. ಆರ್ ನಟನೆಯ ದಿ ಲೂಪ್ ಸಿನಿಮಾ ಪ್ರೇಕ್ಷಕರಿಗೆ ಯಾವ ರೀತಿ ರಂಜಿಸಲಿದೆ ಅನ್ನೋದು ದೀಪಾವಳಿಗೆ ಗೊತ್ತಾಗಲಿದೆ.

ಲಿಂಕ್​: https://youtu.be/ihYWT1HOAas

Last Updated : Oct 4, 2021, 5:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.