ETV Bharat / sitara

ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು: ಆ ಸಿನಿಮಾ ಯಾವುದು ? - ಚದುರಂಗ

ಬ್ರೇಕ್ ಆಪ್ ಪಾರ್ಟಿ ಮಾಡಲು ನಾಲ್ಕು ಜನ ಸ್ನೇಹಿತರು ಒಂದೇ ಮನೆಯಲ್ಲಿ ಸೇರಿದಾಗ, ಆ ಮನೆಯೆಂಬ ಚದುರಂಗದ ಆಟದಲ್ಲಿ ಏನೆಲ್ಲಾ ವಿಚಿತ್ರ ಅನುಭವಗಳು ಆಗುತ್ತೆ ಅನ್ನೋದು ಚೆಕ್ ಮೇಟ್ ಚಿತ್ರದ ಕಥೆ.

the-checkmate-kannada-movie-pressmeet
the-checkmate-kannada-movie-pressmeet
author img

By

Published : Feb 24, 2020, 7:57 PM IST

70ರ ದಶಕದ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾವನ್ನ, ಇಬ್ಬರು ನಿರ್ದೇಶಕರು ನಿರ್ದೇಶನ ಮಾಡುವ ಟ್ರೆಂಡ್ ಇದೆ. ಕಳೆದ ವರ್ಷ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಕೆಲಸ ಮಾಡಿದ್ದರು. ಇದೀಗ ಇಬ್ಬರು ನಿರ್ದೇಶಕರು ಆಕ್ಷನ್ ಕಟ್ ಹೇಳಿರುವ ಸಿನಿಮಾಗಳ ಸಾಲಿಗೆ 'ದ ಚೆಕ್ ಮೇಟ್' ಚಿತ್ರ ಸೇರ್ಪಡೆ ಆಗುತ್ತಿದೆ.

the-checkmate-kannada-movie-pressmeet
ದ ಚೆಕ್ ಮೇಟ್ ಚಿತ್ರದ ಪೋಸ್ಟರ್​

ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ 'ದ ಚೆಕ್ ಮೇಟ್' ಸಿನಿಮಾ ತಮ್ಮ ಚಿತ್ರದ ಹೈಲೆಟ್ಸ್ ಬಗ್ಗೆ ಚಿತ್ರತಂಡ ಮಾಹಿತಿ ಬಿಚ್ಚಿಟ್ಟಿದೆ. ನಿರ್ದೇಶಕರುಗಳಾದ ಭಾರತೀಶ ವಸಿಷ್ಠ ಮತ್ತು ಸಂತೋಷ ಚಿಪ್ಪಾಡಿ, ನಾಯಕ ನಟ ರಂಜನ್ ಹಾಸನ್, ಯುವ ನಟಿ ಪ್ರೀತು ಪೂಜಾ, ವಿಜಯ್ ಚೆಂಡೂರ್, ಸುಧೀರ್ ಕಾಕ್ರೋಜ್, ಸರ್ದಾರ್ ಸತ್ಯ, ಪ್ರದೀಪ್ ಪೂಜಾರಿ, ರಾಜಶೇಖರ್, ವಿಶ್ವ ವಿಜೇತ್ ಸೇರಿದಂತೆ, ಇಡೀ 'ದ ಚೆಕ್ ಮೇಟ್' ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಉಪಸ್ಥಿತರಿದ್ದರು.

'ದ ಚೆಕ್ ಮೇಟ್' ಚಿತ್ರತಂಡ

ಬ್ರೇಕ್ ಆಪ್ ಪಾರ್ಟಿ ಮಾಡಲು ನಾಲ್ಕು ಜನ ಸ್ನೇಹಿತರು ಒಂದೇ ಮನೆಯಲ್ಲಿ ಸೇರಿದಾಗ, ಆ ಮನೆಯೆಂಬ ಚದುರಂಗದ ಆಟದಲ್ಲಿ ಏನೆಲ್ಲಾ ವಿಚಿತ್ರ ಅನುಭವಗಳು ಆಗುತ್ತೆ ಅನ್ನೋದು ಚೆಕ್ ಮೇಟ್ ಚಿತ್ರದ ಕಥೆ. ಪಾರು ಐ ಲವ್ ಯೂ ಸಿನಿಮಾ ನಂತ್ರ, ಈ ಸಿನಿಮಾ ಸಹವಾಸ ಸಾಕು ಅಂತಾ ಅಂದುಕೊಂಡಿದ್ದ, ರಂಜನ್ ಹಾಸನ್ ಮತ್ತೆ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ರಂಜನ್ ಹಾಸನ್ ಸ್ನೇಹಿತರಾಗಿ, ವಿಜಯ್ ಚೆಂಡೂರ್, ಪ್ರದೀಪ್ ಪೂಜಾರಿ, ವಿಶ್ವ ವಿಜೇತ್ , ಕಾಕ್ರೋಜ್ ಸುಧೀರ್ ಕಾಣಿಸಿಕೊಂಡಿದ್ದಾರೆ. ರಂಜನ್ ಹಾಸನ್ ಜೋಡಿಯಾಗಿ ಕಾಣಿಸಿಕೊಂಡಿರುವ ಪ್ರೀತು ಪೂಜಾ ಈ ಚಿತ್ರದಲ್ಲಿ ಮೂಗಿ ಪಾತ್ರವನ್ನ ಮಾಡಿದ್ದಾರೆ. ಶಾರ್ಟ್ ಫಿಲ್ಮ್​ಗಳನ್ನ ಮಾಡ್ತಾ ಇದ್ದ ಭಾರತೀಶ ವಸಿಷ್ಠ ಮತ್ತು ಸಂತೋಷ ಚಿಪ್ಪಾಡಿ ಸಸ್ಪೆನ್ಸ್ ಕಮ್ ಥ್ರಿಲ್ಲಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಶಶಾಂಕ್ ಶೇಷಗಿರಿ ಸಂಗೀತ ಇರುವ, ಈ ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಪಾರು ಐ ಲವ್ ಯು ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟಿಕೊಂಡಿದ್ದ ರಂಜನ್ ಹಾಸನ್ ಮತ್ತೆ ಈ ಚಿತ್ರಕ್ಕೆ ನಿರ್ಮಾಣ ಮಾಡಿ ಆಕ್ಟಿಂಗ್ ಮಾಡಿದ್ದಾರೆ. ಸದ್ಯ ಪೋಸ್ಟರ್​ನಿಂದ ಕುತೂಹಲ ಹುಟ್ಟಿಸಿರೋ 'ದ ಚೆಕ್ ಮೇಟ್' ಸಿನಿಮಾ ಈ ಏಪ್ರಿಲ್​ನಲ್ಲಿ ತೆರೆಗೆ ಬರಲು ರೆಡಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.