ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್ ಕೌಂಟರ್ ಮಾಡಿದ ವಿಷಯ ತಿಳಿದು, ಇಡೀ ದೇಶವೇ ಸಂಭ್ರಮಿಸುತ್ತಿದೆ. ಜೊತೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಅನುರಾಧ ಕೂಡಾ ಅತ್ಯಾಚಾರಿಗಳಿಗೆ ಶಿಕ್ಷೆ ಆಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ' ಮೀಡಿಯಾಗಳಲ್ಲಿ ಎನ್ಕೌಂಟರ್ ಸುದ್ದಿ ನೋಡಿ ಒಂದು ಕ್ಷಣ, ಇದು ನಿಜಾನಾ ಎಂದುಕೊಂಡೆ, ಆದರೆ ಅದು ಸತ್ಯ ಎಂದು ತಿಳಿದ ಮೇಲೆ ಹೆಣ್ಣಾಗಿ ಒಂದು ರೀತಿಯ ಸಮಾಧಾನ ಆಯ್ತು. ಹೆಣ್ಣನ್ನು ಪೂಜಿಸುವ ಭಾರತದಂತ ದೇಶದಲ್ಲಿ ಇಂತಹ ಪ್ರಕರಣಗಳು ಜರುಗಿದಾಗ ನೋವು, ಅವಮಾನ ಆಗುವುದು ಸಹಜ. ದೇವರು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿದ್ದಾನೆ. ಇದನ್ನು ಕ್ರೂರತ್ವ ಎಂದುಕೊಳ್ಳಬೇಡಿ. ಹೆಣ್ಣಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಎಂದು ತಾರಾ ಹೇಳಿದ್ದಾರೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡಾ ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಇದು. ಸಾವನ್ನಪ್ಪಿದ ದಿಶಾ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.