ETV Bharat / sitara

'ಅಪ್ಪು ಪ್ರೀತಿಯ ರಾಯಭಾರಿ' : ಪುನೀತ್ ಕುಟುಂಬಕ್ಕೆ ತಮಿಳು ನಟ ಪ್ರಭು ಗಣೇಶನ್ ಸಾಂತ್ವನ

author img

By

Published : Nov 1, 2021, 5:31 PM IST

ಶಿವಣ್ಣ, ಪುನೀತ್, ರಾಘು ಎಲ್ಲರೂ ಕುಟುಂಬಕ್ಕಿಂತ ಹೆಚ್ಚು ಆಪ್ತರಾಗಿದ್ದೆವು. ಅಪ್ಪು ನಮ್ಮನ್ನ ಬಿಟ್ಟು ಹೋಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ಇಂದು ಭೇಟಿ ನೀಡಿದ ತಮಿಳು ನಟ ಪ್ರಭು ಗಣೇಶನ್ ಭಾವುಕರಾದರು..

house
ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ತಮಿಳು ನಟ ಪ್ರಭು ಗಣೇಶನ್ ಭೇಟಿ

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸಾವಿನ ಹಿನ್ನೆಲೆ ಇಂದು ಪುನೀತ್ ಮನೆಗೆ ಭೇಟಿ ನೀಡಿದ ತಮಿಳು ನಟ ಪ್ರಭು ಗಣೇಶನ್​ ಅಪ್ಪು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿನ ಸದಾಶಿವ ನಗರದ ಮನೆಗೆ ಭೇಟಿ ನೀಡಿದ ತಮಿಳು ನಟ ಪ್ರಭು ಅವರು, ಪುನೀತ್ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು, ನಮ್ಮ ತಂದೆ ಶಿವಾಜಿ ಗಣೇಶನ್ ಹಾಗೂ ವರನಟ ರಾಜಕುಮಾರ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.

ಅದೇ ರೀತಿ ನಾವು ಶಿವಣ್ಣ, ಪುನೀತ್, ರಾಘು ಎಲ್ಲರೂ ಕುಟುಂಬಕ್ಕಿಂತ ಹೆಚ್ಚು ಆಪ್ತರಾಗಿದ್ದೆವು. ಅಪ್ಪು ನಮ್ಮನ್ನ ಬಿಟ್ಟು ಹೋಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದರು. ನಾನು ಅನಾರೋಗ್ಯಕ್ಕೀಡಾದಾಗ ಅಪ್ಪು 6 ಗಂಟೆಗಿಂತ ಹೆಚ್ಚು ಸಮಯ ನನ್ನ ಜತೆ ಕುಳಿತಿದ್ದರು. ಅದನ್ನ ನಾನು ಯಾವತ್ತೂ ಮರೆಯಲ್ಲ.

ಯಾವಾಗ ಬೆಂಗಳೂರಿಗೆ ಬಂದರೂ ಪ್ರತಿ ಬಾರಿ ತಪ್ಪದೇ ಭೇಟಿಯಾಗುತ್ತಿದ್ದೆವು. ಇಬ್ಬರೂ ಆಹಾರ ಪ್ರಿಯರು. ಬೆಂಗಳೂರಿನಲ್ಲಿ ಯಾವುದೇ ಮೂವಿ ಶೂಟಿಂಗ್ ಇದ್ರೂ ಅಲ್ಲಿಗೆ ಬಂದು ಭೇಟಿಯಾಗ್ತಿದ್ದೆ. ತುಂಬಾ ಮುಗ್ಧ ಹುಡುಗ, ಪುನೀತ್ ವಂಡರ್​​ಫುಲ್ ಬಾಯ್.

ನನ್ನ ಪ್ರಕಾರ ಅಪ್ಪು ಪ್ರೀತಿಯ ರಾಯಭಾರಿ. ದೇವರು ಕರುಣೆಯಿಲ್ಲದವನು. ಒಳ್ಳೆ ಹುಡುಗನನ್ನು ಬೇಗ ಕರೆದುಕೊಂಡ. ಇದು ಬಹಳ ಅನ್ಯಾಯ. ಕರ್ನಾಟಕದ ಜನತೆ, ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ಆತನನ್ನ ತುಂಬಾ ಮಿಸ್ ಮಾಡಿಕೊಂಡಿದೆ ಎಂದು ಗದ್ಗದಿತರಾದರು.

ಇದನ್ನೂ ಓದಿ:ಪುನೀತ್​ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಿದ ತಮಿಳು ನಟ ಶಿವಕಾರ್ತಿಕೇಯನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.