ದೊಡ್ಡಬಳ್ಳಾಪುರ: 'ಟಗರು' ಖ್ಯಾತಿಯ ಕಾನ್ಸ್ಟೇಬಲ್ ಸರೋಜ ಹೆಸರಿನಲ್ಲಿ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು, ಕ್ರಿಕೆಟ್ ಟೂರ್ನಮೆಂಟ್ನಲ್ಲಿ ತಮಟೆ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿ ಮೈದಾನಕ್ಕೆ ಎಂಟ್ರಿ ಕೊಟ್ಟ ಕ್ರೀಡಾಪಟುಗಳು ಎಲ್ಲರ ಗಮನ ಸೆಳೆದರು.
ಸಾಮನ್ಯವಾಗಿ ಸಿನಿಮಾದ ನಾಯಕ ನಟ ಹಾಗೂ ನಟಿಯರಿಗೆ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ಹಳ್ಳಿಯೊಂದರಲ್ಲಿ ಟಗರು ಖ್ಯಾತಿಯ ಸರೋಜ ಹೆಸರಿನಲ್ಲಿ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ತಮಟೆ ವಾದ್ಯಗಳಿಂದ ಕುಣಿದು ಕುಪ್ಪಳಿಸಿ ಭರ್ಜರಿಯಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಗಮನ ಸೆಳೆದರು.
ಇದೆಲ್ಲ ಕಂಡು ಬಂದಿದ್ದು ದೊಡ್ಡಬಳ್ಳಾಪುರ ತಾಲೂಕಿನ ಎಸ್. ನಾಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತೂಬಗೆರೆ ಹೋಬಳಿಯ ಗ್ರಾಮಂತರ ಕ್ರಿಕೆಟ್ ಟೂರ್ನಮೆಂಟ್ನಲ್ಲಿ. ಸುತ್ತಮುತ್ತಲಿನ ಗ್ರಾಮಗಳು ಎಂಟ್ರಿ ಕೊಟ್ಟು ಪದ್ಯಗಳನ್ನು ಆಡಿದರು. ಅದರೆ ಈ ಎಲ್ಲಾ ಗ್ರಾಮಗಳ ಟೀಮ್ಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಮಾತ್ರ ಟಗರು ಸರೋಜ ಕ್ರಿಕೆಟ್ ತಂಡ.
ಅಮ್ಮ ಪೇರು ಎಟ್ಲುಂದಿ ಟ್ಯಾಗ್ ಲೈನ್ ಸಹ ಎಲ್ಲರ ಗಮನ ಸೆಳೆಯಿತು. 3 ದಿನ ನಡೆದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಟಗರು ಸರೋಜ ಟೀಮ್ 3 ಪಂದ್ಯಗಳನ್ನು ಗೆದ್ದು ಬೀಗಿದ್ದು, 4ನೇ ಪಂದ್ಯದಲ್ಲಿ ಸೋತು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಟೂರ್ನಮೆಂಟ್ಗೂ ಮುನ್ನ ಟಗರು ಖ್ಯಾತಿಯ ಸರೋಜ ಅವರಿಗೆ ಕರೆ ಮಾಡಿ ಈ ಟೂರ್ನಮೆಂಟ್ಗೆ ಆಹ್ವಾನ ನೀಡಿದ್ದರಂತೆ. ಆದರೆ ಅವರು ಕೆಲಸದ ನಿಮಿತ್ತ ಬರಲಾಗುವುದಿಲ್ಲ ಎಂದು ಹೇಳಿದ್ದರಂತೆ.