ನವದೆಹಲಿ : ತನ್ನ ಶಾಲಾ ದಿನಗಳನ್ನು ನೆನಪಿಸುತ್ತಾ, ಬಾಲಿವುಡ್ ನಟಿ ತಾಪ್ಸಿ ಪನ್ನು ಮಂಗಳವಾರ ಹಳೆ ನೆನಪಿನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸುತ್ತಿರುವ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.
32 ವರ್ಷದ ನಟಿ ತಾಪ್ಸಿ 21 ದಿನಗಳ ಲಾಕ್‌ಡೌನ್ ಸಮಯದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಸರಣಿ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸುಮಧುರ ನೆನಪೊಂದನ್ನು ಹಂಚಿರುವ ಅವರು, ಶಾಲೆಯ ಸಮವಸ್ತ್ರ ಧರಿಸಿ ಶಾಲೆಯ ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರ ಪಕ್ಕದಲ್ಲೇ ಅವರ ಅಪ್ಪ-ಅಮ್ಮ ಕೂಡಾ ನಿಂತಿರೋದು ವಿಶೇಷ.
- " class="align-text-top noRightClick twitterSection" data="
">
ಫೋಟೋ ಬಗ್ಗೆ ಬರೆದಿರುವ ತಾಪ್ಸಿ, ಈ ಚಿತ್ರವು ನನ್ನನ್ನು ಸ್ವಲ್ಪ ಹೆಮ್ಮೆ ಮತ್ತು ಸ್ವಲ್ಪ ಮುಜುಗರಕ್ಕೀಡು ಮಾಡುತ್ತದೆ. ನಾನು ಶಾಲಾ ದಿನಗಳಲ್ಲಿ ಒಂದು ದಿನ ವಿದ್ಯಾರ್ಥಿನಿ ನಾಯಕಿಯಾಗಬೇಕು ಎಂದುಕೊಂಡಿದ್ದೆ. ಅಂತಹ ದಿನಗಳಲ್ಲಿ ಈ ದಿನ ತುಂಬಾ ಪ್ರಮುಖವಾದದ್ದಾಗಿದೆ. ನಾನು ಅಂದುಕೊಂಡದ್ದು ನಡೆದ ಅಪರೂಪದ ದಿನ ಇದು. ಇದುವೇ ನಾನು ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸಿದ ದಿನ ಎಂದು ಹೇಳಿದ್ದಾರೆ.
ಫೋಟೋ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಈ ಫೋಟೋಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.