ETV Bharat / sitara

ಆ ಒಂದು ಸುದಿನಕ್ಕಾಗಿ ಕಾಯುತ್ತಿದ್ದೇನೆ ಅಂದ್ರು ಶ್ವೇತಾ ಚಂಗಪ್ಪ - Kiran appachu

ಕೊಡಗು ಸುಂದರಿ, ನಟಿ ಶ್ವೇತಾ ಚಂಗಪ್ಪ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕೊಡಗಿನ ಹೆಣ್ಣಾಗಿ ಆ ಒಂದು ಸುದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಶ್ವೇತಾ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.

ಶ್ವೇತಾ ಚಂಗಪ್ಪ
author img

By

Published : Aug 19, 2019, 3:27 PM IST

ನಟಿ ಶ್ವೇತಾ ಚೆಂಗಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡಾ ಶ್ವೇತಾಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದರು.

ಇದೀಗ ಶ್ವೇತಾ ಮತ್ತೊಂದು ಭಾವನಾತ್ಮಕ ಪೋಸ್ಟ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಪತಿ ಕಿರಣ್ ಅಪ್ಪಚ್ಚು ಅವರೊಂದಿಗೆ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅದರೊಂದಿಗೆ 'ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ' ಎಂದು ಬರೆದುಕೊಂಡಿದ್ದಾರೆ. ಶ್ವೇತಾ ಅವರ ಈ ಪೋಸ್ಟ್​​​ಗೆ ಸಾಕಷ್ಟು ಜನ ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ವೇತಾ ಈ ಫೋಟೋದಲ್ಲಿ ಹಸಿರು ಬಣ್ಣದ ಕೊಡಗಿನ ಸಾಂಪ್ರದಾಯಿಕ ಶೈಲಿಯ ಸೀರೆ ಧರಿಸಿದ್ದರೆ ಪತಿ ಕಿರಣ್ ಕೂಡಾ ಕೊಡಗಿನ ಉಡುಪು ಧರಿಸಿದ್ದಾರೆ.

ಶ್ವೇತಾ ಹಾಗೂ ಕಿರಣ್ ಅಪ್ಪಚ್ಚು ಅವರದ್ದು ಪ್ರೇಮವಿವಾಹ. ಎಸ್. ನಾರಾಯಣ್ ನಿರ್ದೇಶನದ ’ಸುಮತಿ’ ಧಾರಾವಾಹಿ ಮೂಲಕ ಶ್ವೇತಾ ಕಿರುತೆರೆಗೆ ಪರ್ದಾಪಣೆ ಮಾಡಿದರು. ನಂತರ ‘ಯಾರಿಗುಂಟು ಯಾರಿಗಿಲ್ಲ’ ಸೇರಿ ಇತರ ಕಾರ್ಯಕ್ರಮಗಳನ್ನು ಅವರು ನಿರೂಪಣೆ ಮಾಡಿದ್ದಾರೆ. ಬಿಗ್​​​ಬಾಸ್ ಸೀಸನ್ 2ರಲ್ಲೂ ಅವರು ಭಾಗವಹಿಸಿದ್ದರು. ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕೂಡಾ ಕಾಣಿಸಿಕೊಂಡಿದ್ದರು.

Intro:Body:ಬೆಂಗಳೂರು:  “ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ” ಹೀಗೆಂದು
ತಾಯಿಯಾಗುತ್ತಿರುವ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ತಮ್ಮ ಆಸೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ.
ತಾವೂ ಗರ್ಭಿಣಿಯಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುವ ಶ್ವೇತಾ, ತಮ್ಮ ಪತಿಯೊಂದಿಗೆ ಕೊಡಗಿನ ಸಾಂಪ್ರದಾಯಿಕ ಉಡುಪು ಧರಿಸಿ ತಮ್ಮ ಮನದಾಳದ ಆಸೆಯನ್ನು ಇಂಗಿತಪಡಿಸಿದ್ದಾರೆ.

ನಟಿ ಶ್ವೇತಾ ಚಂಗಪ್ಪ ಅವರು ಮೂಲತಃ ಕೊಡಗಿನವರಾಗಿದ್ದಾರೆ. ಹೀಗಾಗಿ ಅವರು ಕೊಡಗಿನ ಶೈಲಿಯಲ್ಲಿ ಉಡುಪು ಧರಿಸಿಕೊಂಡು ತಮ್ಮ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಶ್ವೇತಾ ಅವರು ಹಸಿರು ಮತ್ತು ಮೆರೂನ್ ಬಣ್ಣದ ಸೀರೆಯಲ್ಲಿ ಸಖತ್ ಮಿಂಚಿದ್ದು, ಪಕ್ಕದಲ್ಲಿ ಅವರ ಪತಿ ಕೊಡಗಿನ ಉಡುಪನ್ನು ಧರಿಸಿದ್ದಾರೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಬಯಕೆಯೊಂದನ್ನು ಹೇಳಿಕೊಂಡಿದ್ದಾರೆ.
“ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ” ಎಂದು ಶ್ವೇತಾ ಅನಿಸಿಕೆ ಹಂಚಿಕೊಂಡಿದ್ದಾರೆ.
https://www.instagram.com/p/B1Qv6Foj2nO/?utm_source=ig_web_options_share_sheet

ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ‘ಯಾರಿಗುಂಟು ಯಾರಿಗಿಲ್ಲ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಆದರೆ ಇವರು ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ರಾಣಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.