ನವದೆಹಲಿ : 1994ರ ಮಿಸ್ ಯೂನಿವರ್ಸ್ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ತಮ್ಮ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ವದಂತಿಗೆ ಕೊನೆಗೂ ತೆರೆ ಎಳೆದಿದ್ದಾರೆ.
ನಟಿ ಸುಶ್ಮಿತಾ ಸೇನ್ ಮತ್ತು ಅವರ ಗೆಳೆಯ ರೋಹ್ಮನ್ ಶಾಲ್ ಅವರ ಪ್ರೀತಿ ಬ್ರೇಕ್ ಅಪ್ ಆಗಿರುವ ಸುದ್ದಿ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಇದೀಗ ಸುಶ್ಮಿತಾ ಸೇನ್ ಸ್ಪಷ್ಟನೆ ನೀಡಿದ್ದಾರೆ.
ರೂಪದರ್ಶಿಯಾಗಿರುವ ರೋಹ್ಮನ್ ಶಾಲ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಟಿ, ಬಹು ದಿನಗಳ ಹಿಂದೆಯೇ ನಮ್ಮಿಬ್ಬರ ನಡುವಿನ ಸಂಬಂಧ ಕೊನೆಗೊಂಡಿದೆ. ನಮ್ಮಿಬ್ಬರ ಸಂಬಂಧ ಸ್ನೇಹದಿಂದ ಪ್ರಾರಂಭವಾಯಿತು. ನಾವೀಗ ಸ್ನೇಹಿತರಾಗಿ ಉಳಿದುಕೊಂಡಿದ್ದೇವೆ, ಪ್ರೀತಿ ಉಳಿದಿದೆ ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹ್ಮನ್, "ಯಾವಾಗಲೂ" ಎಂದು ಬರೆದು ನಂತರ ಎರಡು ಹೃದಯ ಎಮೋಜಿಗಳನ್ನು ಕೊಟ್ಟು ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಬ್ರೇಕ್ ಅಪ್ ಪೋಸ್ಟ್‌ಗೆ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ.
- " class="align-text-top noRightClick twitterSection" data="
">
2018ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಈ ಜೋಡಿ, ಅದೇ ವರ್ಷ ಶಿಲ್ಪಾ ಶೆಟ್ಟಿ ಅವರ ದೀಪಾವಳಿ ಪಾರ್ಟಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿತ್ತು.