ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ದಿಲ್ ಬೇಚಾರಾ ಚಿತ್ರದ ಟ್ರೈಲರ್ ಜುಲೈ 6 ರಂದು ಬಿಡುಗಡೆಯಾಗಲಿದೆ ಎಂಬ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ನಟಿ ಸಂಜನಾ ಸಂಘಿ ಬಹಿರಂಗಪಡಿಸಿದ್ದಾರೆ.
ರೊಮ್ಯಾಂಟಿಕ್ ಪೋಸ್ಟರ್‌ನಲ್ಲಿ ಅಗಲಿದ ನಟ ಸುಸಾಂತ್ ಸ್ಮೈಲ್ ಆಗಿ ಬೈಕು ಸವಾರಿ ಮಾಡುತ್ತಿದ್ದರೆ, ಸಂಜನಾ ತನ್ನ ಕೈಗಳಿಂದ ನಟನನ್ನು ಹಿಡಿದುಕೊಂಡು, ಭುಜಕ್ಕೆ ತಲೆ ಇಟ್ಟು ಕುಳಿತಿರುವುದನ್ನು ಕಾಣಬಹುದು
"ಇದು ಚಿತ್ರದ ನೆಚ್ಚಿನ ಶಾರ್ಟ್ಗಳಲ್ಲಿ ಒಂದಾಗಿದೆ. #DilBechara trailer will be out tomorrow," ಎಂದು 23 ವರ್ಷದ ನಟಿ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
- " class="align-text-top noRightClick twitterSection" data="
">
ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತಿಮ ಚಿತ್ರವಾದ್ದರಿಂದ ಮುಂಬರುವ ರೊಮ್ಯಾಂಟಿಕ್ ಚಿತ್ರವನ್ನು ಲಕ್ಷಾಂತರ ಅವರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಕಾದು ಕುಳಿತಿದ್ದಾರೆ,