ETV Bharat / sitara

'ಕನ್ನಡಿಗ' ಚಿತ್ರದಲ್ಲಿ ನಾನು ನಟಿಸ್ತಿಲ್ಲ ಅಂದ್ರು ಸುಮಲತಾ...ಅವರ ಸ್ಥಾನಕ್ಕೆ ಬಂದ ನಟಿ ಯಾರು...? - Giriraj direction new movie

ಸುಮಲತಾ ಅಂಬರೀಶ್​ ಅವರು ಕಾರಣಾಂತರಗಳಿಂದ 'ಕನ್ನಡಿಗ' ಸಿನಿಮಾದಿಂದ ಹೊರಬಂದಿದ್ದು ಆ ಜಾಗಕ್ಕೆ ಭವಾನಿ ಪ್ರಕಾಶ್ ಬಂದಿದ್ದಾರೆ. ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ರವಿಚಂದ್ರನ್ ಈ ಸಿನಿಮಾದಲ್ಲಿ ಎರಡು ಶೇಡ್​​​​​ಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Kannadiga movie
ಸುಮಲತಾ ಅಂಬರೀಶ್​
author img

By

Published : Dec 1, 2020, 12:11 PM IST

ರವಿಚಂದ್ರನ್ ಅಭಿನಯದ 'ಕನ್ನಡಿಗ' ಚಿತ್ರದಲ್ಲಿ ಹಿರಿಯ ನಟಿ, ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರು ನಟಿಸಬೇಕಿತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ನಿರ್ದೇಶಕ , 'ಜಟ್ಟ' ಖ್ಯಾತಿಯ ಗಿರಿರಾಜ್ ಅವರೇ 'ಕನ್ನಡಿಗ' ಚಿತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಾರೆ ಎಂದು ಹೇಳಿದ್ದರು. ಇದೀಗ ಚಿತ್ರದಲ್ಲೊಂದು ಮಹತ್ತರ ಬದಲಾವಣೆಯಾಗಿದ್ದು, ಸುಮಲತಾ ಬದಲು ನಟಿ ಭವಾನಿ ಪ್ರಕಾಶ್ , ರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Kannadiga movie
ಭವಾನಿ ಪ್ರಕಾಶ್

'ಕನ್ನಡಿಗ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಚಿತ್ರೀಕರಣವನ್ನು ನಿಧಾನವಾಗಿ ಮುಗಿಸಲು ಇದಕ್ಕೂ ಮುನ್ನ ಚಿತ್ರತಂಡ ನಿರ್ಧರಿಸಿತ್ತು. ಆದರೆ ಇದೀಗ ಚಿತ್ರತಂಡದವರ ಯೋಚನೆ ಬದಲಾಗಿದ್ದು, ಚಿತ್ರವನ್ನು ಆದಷ್ಟು ಬೇಗ ಮುಗಿಸಿ, ಡಿಸೆಂಬರ್ 31 ಒಳಗೆ ಸೆನ್ಸಾರ್​​​​​​​​​ಗೆ ಕಳಿಸಬೇಕು ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. 'ಕನ್ನಡಿಗ' ಚಿತ್ರದಲ್ಲಿ ರವಿಚಂದ್ರನ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನಿನ್ನೆಯಷ್ಟೇ ಗುಣಭದ್ರನ ಫಸ್ಟ್​​​​ಲುಕ್ ರಿವೀಲ್ ಆಗಿತ್ತು. ರವಿಚಂದ್ರನ್ ಜೊತೆಗೆ ಜೇಮಿ ಆಲ್ಟರ್, ಪಾವನಾ ಗೌಡ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರವನ್ನು ಎನ್​​​​​​​​​​​​​​​​​​​​​​​​​​.ಎಸ್. ರಾಜ್‍ಕುಮಾರ್ ನಿರ್ಮಾಣ ಮಾಡಿದ್ದು, ಗಿರಿರಾಜ್ ನಿರ್ದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.