ETV Bharat / sitara

'ದಬಾಂಗ್ 3' ಚಿತ್ರದಲ್ಲಿ ನಟಿಸಲು ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ? - ದಬಾಂಗ್ 3 ಬಜೆಟ್

2019ರಲ್ಲಿ ತೆರೆ ಕಂಡ ಬಾಲಿವುಡ್​ನ ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಪಡೆದ ಸಂಭಾವಣೆ ಎಷ್ಟು ಎಂಬುವುದರ ಬಗ್ಗೆ ಸ್ವತಃ ಕಿಚ್ಚ ಮಾಹಿತಿ ನೀಡಿದ್ದಾರೆ.

Sudeep's remuneration for starring in 'Dabangg 3'
ದಬಾಂಗ್ 3 ಚಿತ್ರದಲ್ಲಿ ನಟಿಸಲು ಸುದೀಪ್ ಪಡೆದ ಸಂಭಾವನೆ
author img

By

Published : May 11, 2021, 10:08 AM IST

ಸಲ್ಮಾನ್ ಖಾನ್ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿರುವ 'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಸುದೀಪ್ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಸೂಪರ್ ಸ್ಟಾರ್ ಆಗಿರುವಾಗ, ಸಲ್ಮಾನ್ ಎದುರು ವಿಲನ್ ಆಗಿ ನಟಿಸುವುದರ ಜೊತೆಗೆ ಅವರಿಂದ ಹೊಡೆತ ತಿನ್ನುವ ಅವಶ್ಯಕತೆ ಏನಿತ್ತು ಎಂದು ಹಲವರು ಸುದೀಪ್ ನಟನೆಯ ಬಗ್ಗೆ ಮಾತಾಡಿಕೊಂಡಿದ್ದರು. ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದಿದೆ. ಎಲ್ಲರೂ ಚಿತ್ರವನ್ನು ಮರೆತುಬಿಟ್ಟಿದ್ದಾರೆ.

ಆದರೆ, ದಬಾಂಗ್​ 3 ಚಿತ್ರಕ್ಕೆ ಸುದೀಪ್ ಪಡೆದ ಸಂಭಾವಣೆ ಎಷ್ಟು ಎಂಬ ಪ್ರಶ್ನೆ ಕೆಲವರಲ್ಲಿ ಖಂಡಿತವಾಗಿಯೂ ಇರುತ್ತದೆ. ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಸುದೀಪ್ ಕೋಟ್ಯಂತರ ರೂ. ಸಂಭಾವನೆ ಪಡೆದಿರಬಹುದು ಎಂದು ನೀವು ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. ಯಾಕೆಂದರೆ ದಬಾಂಗ್ 3 ಚಿತ್ರದ ನಟನೆಗೆ ಒಂದು ರೂಪಾಯಿಯನ್ನೂ ಕೂಡ ಸುದೀಪ್ ಪಡೆದುಕೊಂಡಿಲ್ಲವಂತೆ. ಈ ಬಗ್ಗೆ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ನಾಲ್ಕು ವರ್ಷ ಪೂರೈಸಿದ ‘ಬ್ರಹ್ಮಗಂಟು’: ಗುಂಡಮ್ಮನಿಗೆ ಮನಸೋತ ಕನ್ನಡಿಗರು

ಸುದೀಪ್ ಮತ್ತು ಸಲ್ಮಾನ್ ಅವರ ಸಹೋದರ ಸೊಹೈಲ್ ಖಾನ್ ಒಳ್ಳೆಯ ಸ್ನೇಹಿತರು. ಇಬ್ಬರೂ ಸಿಸಿಎಲ್‌ನಲ್ಲಿ ಆಡಿದವರು ಮತ್ತು ಆಗಿನಿಂದ ಒಳ್ಳೆಯ ಗೆಳೆಯರಾಗಿದ್ದವರು. ದಬಾಂಗ್ 3 ಚಿತ್ರ ನಿರ್ಮಿಸಿದ್ದು ಇದೇ ಸೊಹೈಲ್ ಖಾನ್. ಸೊಹೈಲ್ ಬಂದು ಚಿತ್ರದಲ್ಲಿ ನಟಿಸುವುದಕ್ಕೆ ಆಫರ್ ನೀಡಿದಾಗ ಸುದೀಪ್‌ಗೆ ಇಲ್ಲ ಎಂದು ಹೇಳುವುದಕ್ಕೆ ಆಗಲಿಲ್ಲವಂತೆ. ಹಾಗಾಗಿ, ಚಿತ್ರಕ್ಕೆ ಒಂದು ರೂಪಾಯಿ ಕೂಡ ಪಡೆಯದೆ ಸುದೀಪ್ ನಟಿಸಿದ್ದಾರಂತೆ.

ಸುದೀಪ್ ಸಂಭಾವನೆ ಪಡೆಯದೆ ನಟಿಸಿರಬಹುದು. ಆದರೆ, ಚಿತ್ರ ಬಿಡುಗಡೆಯ ನಂತರ ಸ್ವತಃ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಬೆಂಗಳೂರಿಗೆ ಬಂದು ಸುದೀಪ್‌ಗೆ ಒಂದೂವರೆ ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಎಂ5 ಕಾರನ್ನು ಉಡುಗೊರೆಯಾಗಿ ಕೊಟ್ಟು ಹೋಗಿದ್ದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.