ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಅದ್ದೂರಿ ಮೇಕಿಂಗ್ನಿಂದ ಕೂಡಿದೆ.
ಕನ್ನಡದಲ್ಲಿ ಬಾರೋ ಪೈಲ್ವಾನ ಎಂಬ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಗಾಯಕರಾದ ವಿಜಯ್ ಪ್ರಕಾಶ್, ಕೈಲಾಶ್ ಖೇರ್ ಹಾಗೂ ಚಂದನ್ ಶೆಟ್ಟಿ ಧ್ವನಿ ನೀಡಿದ್ದಾರೆ. ಮಾಸ್ ಆಗಿರುವ ಈ ಹಾಡಿನಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಬಾದ್ಷಾ ಕಿಚ್ಚ ಸುದೀಪ್ ನೂರಾರು ಡ್ಯಾನ್ಸರ್ಗಳ ಜೊತೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.
-
Second lyrical song from #Pailwaan.
— Kichcha Sudeepa (@KicchaSudeep) July 30, 2019 " class="align-text-top noRightClick twitterSection" data="
Kannada https://t.co/xbVf4ruVnv
Hindihttps://t.co/L2yp6uR53g
Tamilhttps://t.co/MxZFdRm4eq
Teluguhttps://t.co/ghOnD1boip
Malayalamhttps://t.co/5GCuJkHwPn
🤗🤗🥂
">Second lyrical song from #Pailwaan.
— Kichcha Sudeepa (@KicchaSudeep) July 30, 2019
Kannada https://t.co/xbVf4ruVnv
Hindihttps://t.co/L2yp6uR53g
Tamilhttps://t.co/MxZFdRm4eq
Teluguhttps://t.co/ghOnD1boip
Malayalamhttps://t.co/5GCuJkHwPn
🤗🤗🥂Second lyrical song from #Pailwaan.
— Kichcha Sudeepa (@KicchaSudeep) July 30, 2019
Kannada https://t.co/xbVf4ruVnv
Hindihttps://t.co/L2yp6uR53g
Tamilhttps://t.co/MxZFdRm4eq
Teluguhttps://t.co/ghOnD1boip
Malayalamhttps://t.co/5GCuJkHwPn
🤗🤗🥂
ಇನ್ನು ಅರ್ಜುನ್ ಜನ್ಯ ಸಂಗೀತ ಇರುವ ಈ ಹಾಡು ಅಭಿಮಾನಿಗಳನ್ನು ಮನರಂಜಿಸುತ್ತಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಅಚಾರ್ಯ ನೃತ್ಯ ಸಂಯೋಜನ ಮಾಡಿದ್ದು, ಅದ್ದೂರಿ ಸೆಟ್ನಲ್ಲಿ ಸುದೀಪ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 4 ಲಕ್ಷ ಜನ ವೀಕ್ಷಿಸಿದ್ದಾರೆ.
ಈ ಚಿತ್ರದಲ್ಲಿ, ಆಕಾಂಕ್ಷಾ ಸಿಂಗ್, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್ ಹೀಗೆ ದೊಡ್ಡ ತಾರಾ ಬಳಗವಿದೆ.