ಫ್ಯಾಂಟಮ್ ಸಿನಿಮಾ ಟೈಟಲ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ. ಈ ಚಿತ್ರದ ಪೋಸ್ಟರ್ ಹಾಗು ಕಿಚ್ಚನ ಖಡಕ್ ಎಂಟ್ರಿಯಿಂದಲೇ ವಿಶ್ವಾದ್ಯಂತ ಸದ್ದು ಮಾಡಿದೆ. ಈ ಸಿನಿಮಾ ಶೂಟಿಂಗ್ ಅನ್ನು ಕೊರೊನಾ ಕಾಲದಲ್ಲಿಯೇ ಶುರುಮಾಡಿದ್ದು, ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು, ಸಿನಿಮಾಕ್ಕಾಗಿ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಮತ್ತೊಂದು ಅದ್ದೂರಿ ಸೆಟ್ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಹಾಕಲಾಗುತ್ತಿರುವ ಸೆಟ್ನಲ್ಲಿ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ನಡೆಯಲಿದೆಯಂತೆ. ಚಿತ್ರವನ್ನು 130ಕ್ಕೂ ಹೆಚ್ಚು ದಿನಗಳ ಶೂಟ್ ಮಾಡಲು ನಿರ್ದೇಶಕ ಅನೂಪ್ ಭಂಡಾರಿ ಪ್ಲಾನ್ ಮಾಡಿದ್ರಂತೆ. ಅದರಂತೆ ಈಗ ನಾವು ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ್ದೇವೆ ಎಂದು ತಿಳಿಸಿದರು.
![Sudeep Phantom Movie In Climax Shooting](https://etvbharatimages.akamaized.net/etvbharat/prod-images/kn-bng-03-sudeep-phantom-movie-in-climax-shooting-video-7204735_08102020142405_0810f_1602147245_651.jpg)
ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್ ಮುಗಿದ ಮೇಲೆ ಹಾಡುಗಳ ಚಿತ್ರೀಕರಣ ಮಾಡಲಾಗುತ್ತದೆ. ಹಾಡುಗಳನ್ನು ಬೆಂಗಳೂರು ಅಥವಾ ಮಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ.
![Sudeep Phantom Movie In Climax Shooting](https://etvbharatimages.akamaized.net/etvbharat/prod-images/kn-bng-03-sudeep-phantom-movie-in-climax-shooting-video-7204735_08102020142405_0810f_1602147245_276.jpg)
ಚಿತ್ರದಲ್ಲಿ ವಿಕ್ರಾಂತ್ ರೋಣನಾಗಿ ಕಾಣಿಸಿಕೊಳ್ಳುತ್ತಿರುವ ಕಿಚ್ಚನ ಲುಕ್ ಮೇಕ್ ಒವರ್ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ಕಿಚ್ಚನ ಜೊತೆ ನಿರೂಪ್ ಭಂಡಾರಿ, ನೀತು ಅಶೋಕ್ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ನೀಡುತ್ತಿದ್ದಾರೆ.
![Sudeep Phantom Movie In Climax Shooting](https://etvbharatimages.akamaized.net/etvbharat/prod-images/kn-bng-03-sudeep-phantom-movie-in-climax-shooting-video-7204735_08102020142405_0810f_1602147245_491.jpg)