ETV Bharat / sitara

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಸುಚಿತ್ರ ಫಿಲ್ಮ್ ಸೊಸೈಟಿ

author img

By

Published : Aug 26, 2020, 10:31 AM IST

ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿ ಆಗಸ್ಟ್ 28 ರಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. 1971 ರಲ್ಲಿ ಸ್ಥಾಪಿತವಾದ ಇದು ಕನ್ನಡ ಚಿತ್ರರಂಗದ ಮೊದಲ ಫಿಲ್ಮ್ ಸೊಸೈಟಿ.

Suchitra Film society
ಸುಚಿತ್ರ ಫಿಲ್ಮ್ ಸೊಸೈಟಿ

1971 ರಲ್ಲಿ ಆರಂಭ ಆದ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿ ಈಗ ಅರ್ಧ ಶತಕ ಪೂರೈಸಿದೆ. ಸಿನಿಮಾ, ಸಾಹಿತ್ಯ, ರಂಗಭೂಮಿ ಚಟುವಟಿಕೆಗಳ ತಾಣ ಆದ ಸುಚಿತ್ರ ಫಿಲ್ಮ್​ ಸೊಸೈಟಿ ಈಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

Suchitra Film society
ಸುವರ್ಣ ಮಹೋತ್ಸವದ ಆಹ್ವಾನ ಪತ್ರಿಕೆ

1970 ಕನ್ನಡ ಸಿನಿಮಾ ಲೋಕದಲ್ಲಿ ಸುವರ್ಣ ಸಮಯ ಎನ್ನಬಹುದು. 'ಸಂಸ್ಕಾರ'ದಂತ ಪಾತ್ ಬ್ರೇಕಿಂಗ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಆ ಸಮಯಲ್ಲಿ ಸ್ಯಾಂಡಲ್​​ವುಡ್​​​ ಮೊದಲ ಫಿಲ್ಮ್​ ಸೊಸೈಟಿ ಆಗಿ ಸುಚಿತ್ರ ಹೊರ ಬಂತು. 1980ರಲ್ಲಿ ಸುಚಿತ್ರ ಸಿನಿಮಾ ಕಲ್ಚರಲ್ ಆಕಾಡೆಮಿ ಕೂಡಾ ಸ್ಥಾಪನೆಯಾಯ್ತು. ಈಗ ಈ ಫಿಲ್ಮ್ ಸೊಸೈಟಿ ಖಾಸಗಿ ಪ್ರಾಯೋಗಿತ್ವದಲ್ಲಿ ಪೂರ್ವಂಕರ ಸುಚಿತ್ರ ಸಿನಿಮಾ ಹಾಗೂ ಕಲ್ಚರಲ್ ಅಕಾಡೆಮಿ ಆಗಿದೆ.

Suchitra Film society
ಗಿರೀಶ್ ಕಾಸರವಳ್ಳಿ

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಬರಹಗಾರ, ಆಸ್ಕರ್ ಪ್ರಶಸ್ತಿ ವಿಜೇತ ಸತ್ಯಜಿತ್ ರೇ, 1980ರಲ್ಲಿ ಸುಚಿತ್ರ ಕಲ್ಚರಲ್​​​​​​​ ಅಕಾಡೆಮಿಯನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಸುಚಿತ್ರ ಫಿಲ್ಮ್ ಸೊಸೈಟಿ 50 ರ ಹೊಸ್ತಿಲಲ್ಲಿ ನಿಂತಿದೆ. ಇದೇ ಶುಕ್ರವಾರ, ಅಂದರೆ ಆಗಸ್ಟ್ 28 ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಆದರೆ ಈ ಕಾರ್ಯಕ್ರಮವನ್ನು ಆಸಕ್ತರು ಫೇಸ್​​​ಬುಕ್ ಲೈವ್​​​ನಲ್ಲಿ ನೋಡಬಹುದಾಗಿದೆ.

Suchitra Film society
ಹೆಚ್​​​​.ಎನ್ ನರಹರಿ ರಾವ್

ಆಗಸ್ಟ್ 28 ಸಂಜೆ 6ಕ್ಕೆ ಹೆಚ್​​​​​​.ಎನ್.​​​​​​​​​​​​​​ನರಹರಿ ರಾವ್ ನಿರ್ದೇಶನದ ಸುಚಿತ್ರ -50 ಸಾಕ್ಷ್ಯಚಿತ್ರ ಪ್ರದರ್ಶನ ಆಗಲಿದೆ. ಈ ಸಮಯದಲ್ಲಿ ಆರಂಭದಿಂದಲೂ ಸುಚಿತ್ರ ಫಿಲ್ಮ್ ಸೊಸೈಟಿ ಜೊತೆ ಬಾಂಧವ್ಯ ಹೊಂದಿರುವ ಹೆಚ್​​​​.ಎನ್ ನರಹರಿ ರಾವ್, ಪದ್ಮಶ್ರೀ ಡಾ. ಗಿರೀಶ್​​​​​ ಕಾಸರವಳ್ಳಿ, ಮನು ಚಕ್ರವರ್ತಿ, ಎನ್​​.ವಿದ್ಯಾಶಂಕರ್, ಕೆ.ವಿ. ಆರ್​​. ಠಾಗೋರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

Suchitra Film society
ಮನು ಚಕ್ರವರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.