ಟಾಲಿವುಡ್ ನಟಿ ಶ್ರೀರೆಡ್ಡಿಯಿಂದ ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟ ಮುಂದುವರೆದಿದೆ. ಈಗಾಗಲೇ ಸಾಕಷ್ಟು ನಟರು, ನಿರ್ಮಾಪಕರು ಹಾಗೂ ನಿರ್ದೇಶಕರ ಬಣ್ಣ ಬಯಲು ಮಾಡಿರುವ ಈ ತಾರೆ, ಇದೀಗ ಲೆಜೆಂಡ್ ನಟರ ವಿರುದ್ಧವೂ ಹರಿಹಾಯ್ದಿದ್ದಾರೆ.
ಇಂದು ಫೇಸ್ಬುಕ್ನಲ್ಲಿ ನಟಿ ಸಿಲ್ಕ್ ಸ್ಮಿತಾ ಫೋಟೋ ಶೇರ್ ಮಾಡಿರುವ ಶ್ರೀರೆಡ್ಡಿ, 'ಲೆಜೆಂಡ್ ನಟರು ಎನ್ನಿಸಿಕೊಂಡ ಕೆಲವರು ಈಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದರು. ಅಂತಹ ಸೈಕೋಗಳನ್ನು ನಾವು ಹೇಗೆ ಮೇರು ನಟರು ಅಂತಾ ಕರೆಯಬೇಕೆಂದು ನೀವೇ ಹೇಳಿ' ಎಂದು ಪ್ರಶ್ನಿಸಿದ್ದಾರೆ. 'ಸಿನಿಮಾ ರಾಜಕೀಯ ಮಧ್ಯದಲ್ಲಿ ನಾವು ಆಕೆಯನ್ನು ಕಳೆದುಕೊಂಡು ಬಿಟ್ವಿ. ಅವಳೇ ನಿಜವಾದ ಲೆಜೆಂಡ್. ಸ್ಮಿತಾ ಮೇಡಂ, ನಾವು ನಿಮ್ಮನ್ನು ಎಂದಿಗೂ ಮರೆಯೊಲ್ಲ' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">
ಒಂದು ಕಾಲದಲ್ಲಿ ಹಾಟ್ ಫೆವರೆಟ್ ಆಗಿದ್ದ ಸಿಲ್ಕ್ ಸ್ಮೀತಾ ಜೀವನ ದುರಂತ ಅಂತ್ಯ ಕಂಡಿತು. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಈ ಸ್ಮೀತಾ, ಸರಿಸುಮಾರು 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 1996 ಸೆಪ್ಟೆಂಬರ್ 23 ರಂದು ಚೆನ್ನೈನ ಆಕೆ ತಂಗಿದ್ದ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ರು.