ETV Bharat / sitara

ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ ಶ್ರೀ ಜಗನ್ನಾಥದಾಸರ ಜೀವನಚರಿತ್ರೆ..! - Raghavendra swamy follower

ಗುರು ರಾಘವೇಂದ್ರ ಸ್ವಾಮಿಗಳ ಅನುಯಾಯಿಗಳಾದ ಜಗನ್ನಾಥದಾಸರ ಜೀವನ ಚರಿತ್ರೆ ತೆರೆ ಮೇಲೆ ಬರುತ್ತಿದ್ದು ಈ ಚಿತ್ರಕ್ಕೆ 'ಶ್ರೀ ಜಗನ್ನಾಥದಾಸರು' ಎಂಬ ಹೆಸರಿಡಲಾಗಿದೆ. ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

Sri Jagannathadasaru
ಶ್ರೀ ಜಗನ್ನಾಥದಾಸರ ಜೀವನಚರಿತ್ರೆ
author img

By

Published : Jan 20, 2021, 1:27 PM IST

ಕನ್ನಡ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡನಾಡಿನ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರಾದ ಶ್ರೀ ಜಗನ್ನಾಥದಾಸರ ಜೀವನ ಚರಿತ್ರೆ ತೆರೆ ಮೇಲೆ ಬರುತ್ತದೆ. ಮಧುಸೂದನ್ ಹವಾಲ್ದಾರ್ ಎಂಬುವರು, 'ಶ್ರೀ ಜಗನ್ನಾಥದಾಸರು' ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಹಾಗೂ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಇತ್ತೀಚೆಗೆ ನೆರವೇರಿತು. ಮಂತ್ರಾಲಯದ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಆಶೀರ್ವದಿಸಿದ್ದಾರೆ. ಜಗನ್ನಾಥದಾಸರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಯಾಯಿಗಳು. ಅವರ ಬಾಲ್ಯದ ಜೀವನ, ಯೌವ್ವನ ಹಾಗೂ ಆಧ್ಯಾತ್ಮಿಕ ಜೀವನದ ಕುರಿತಂತೆ ರಚಿಸಲಾಗಿರುವ ಕಥಾಸಾರವನ್ನು ಈ ಚಿತ್ರದ ಮೂಲಕ ನಿರ್ದೇಶಕ ಮಧುಸೂದನ್ ಹೇಳಹೊರಟಿದ್ದಾರೆ. ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಧುಸೂದನ್ ಹವಾಲ್ದಾರ್, ಇದಕ್ಕೂ ಮುನ್ನ ಟಿ.ಎನ್. ಸೀತಾರಾಂ ಸಹಾಯಕ ನಿರ್ದೇಶಕರಾಗಿದ್ದರು. ನಂತರ ಕೆಲವು ತೆಲುಗು ಚಿತ್ರಗಳು ಹಾಗೂ ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

Sri Jagannathadasaru
ಬೆಳ್ಳಿತೆರೆ ಮೇಲೆ ಜಗನ್ನಾಥದಾಸರ ಜೀವನ ಚರಿತ್ರೆ

ಇದನ್ನೂ ಓದಿ: ಸೂಪರ್ ಹಿಟ್​​ ತಮಿಳು ರೀಮೇಕ್​​​​ ಚಿತ್ರದಲ್ಲಿ ಸೈಫ್ ಅಲಿ ಖಾನ್-ಹೃತಿಕ್ ರೋಷನ್

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಧುಸೂದನ್ ಪುರಂದರದಾಸರು, ಕನಕದಾಸರು, ರಾಘವೇಂದ್ರ ಶ್ರೀಗಳ ಕುರಿತಂತೆ ಈಗಾಗಲೇ ಚಲನಚಿತ್ರಗಳು ನಿರ್ಮಾಣವಾಗಿವೆ. ಆದರೆ ಮಹಾನ್ ಕೃತಿಗಳನ್ನು ರಚಿಸಿದಂಥ ಜಗನ್ನಾಥದಾಸರ ಜೀವನ ಕುರಿತಂತೆ ಯಾರೂ ಸಿನಿಮಾ ಮಾಡಿಲ್ಲ. ಈ ಕುರಿತಂತೆ ಜೆ.ಎಂ. ಪ್ರಹ್ಲಾದ್ ಅವರ ಜೊತೆ ಕೂಲಂಕುಶವಾಗಿ ಚರ್ಚಿಸಿ ಸಂಪೂರ್ಣ ಚಿತ್ರಕಥೆ ಸಿದ್ಧಪಡಿಸಿಕೊಂಡು, ಅದಕ್ಕೆ ಸರಿಯಾದ ಪಾತ್ರಧಾರಿಗಳನ್ನು ಹುಡುಕಿ ಈಗ ಚಿತ್ರೀಕರಣಕ್ಕೆ ಹೊರಟಿದ್ದೇವೆ. ರಾಯರ ಮಠದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿ ನಂತರ ಮಾನ್ವಿಯಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಕಾಣಿಸುವುದರಿಂದ ಶೇ.90ರಷ್ಟು ಭಾಗವನ್ನು ಗ್ರಾಫಿಕ್ಸ್​​​​​​​​ನಲ್ಲೇ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಹಾಗಾಗಿ ಬೆಂಗಳೂರಿನ ಹನುಮಂತನಗರದಲ್ಲಿ ಒಂದು ಫ್ಲೋರ್‌ ತೆಗೆದುಕೊಂಡು ಅಲ್ಲಿ ಗ್ರೀನ್‌ಮ್ಯಾಟ್‌ನಲ್ಲಿ ಸಂಪೂರ್ಣ ಚಿತ್ರವನ್ನು ಮಾಡಲಿದ್ದೇವೆ.

Sri Jagannathadasaru
'ಶ್ರೀ ಜಗನ್ನಾಥದಾಸರು' ಚಿತ್ರೀಕರಣ

ನೀನಾಸಂ ಪ್ರತಿಭೆ ಶರತ್ ಜೋಷಿ ಅವರನ್ನು ಜಗನ್ನಾಥದಾಸರ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಉಳಿದಂತೆ ಹಿರಿಯ ಕಲಾವಿದರಾದ ರಮೇಶ್‌ಭಟ್, ಸುಧಾರಾಣಿ, ಸುಚೇಂದ್ರ ಪ್ರಸಾದ್, ಶಿವರಾಮಣ್ಣ ಸೇರಿದಂತೆ ಸಾಕಷ್ಟು ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾವು ಜಗನ್ನಾಥದಾಸರ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಶರತ್‌ಜೋಷಿ ಕಾಲಿಗೆ ಸಿಕ್ಕ ಬಳ್ಳಿಯಂತೆ ಸಿಕ್ಕರು. ಅವರಿಗೆ ಕಾಸ್ಟ್ಯೂಮ್ ಹಾಕಿ ನೋಡಿದಾಗ ಸಾಕ್ಷಾತ್ ಜಗನ್ನಾಥದಾಸರೇ ಎದುರು ನಿಂತ ಹಾಗಿತ್ತು. ಅಲ್ಲದೆ ಚಿತ್ರವನ್ನು ಇದೇ ಆಗಸ್ಟ್​​​​​ನಲ್ಲಿ ಬಿಡುಗಡೆ ಮಾಡುವುದಾಗಿ ಹಾಗೂ ಧಾರಾವಾಹಿಯನ್ನು ಜಗನ್ನಾಥದಾಸರ ಆರಾಧನೆ ಸಮಯದಲ್ಲಿ ಪ್ರಸಾರ ಮಾಡಬೇಕೆಂದು ನಿರ್ಧರಿಸಿದ್ದೇವೆ. ದಾಸಸಾಹಿತ್ಯ ಪರಂಪರೆಯಲ್ಲಿ ತುಂಬಾ ಉತ್ಕೃಷ್ಟವಾಗಿ ಬರೆದಂಥವರು ಜಗನ್ನಾಥದಾಸರು. ಅವರ ಕಥೆಯನ್ನು ತೆರೆಮೇಲೆ ತರಬೇಕೆಂಬುದು ನಮ್ಮ ಬಹುದಿನಗಳ ಬಯಕೆಯಾಗಿತ್ತು. ಈ ಚಿತ್ರದ ನಂತರ ಶ್ರೀಪಾದರಾಜರು ಸೇರಿದಂತೆ ಹಲವಾರು ಮಹಿಮಾ ಪುರುಷರ ಕಥೆಗಳನ್ನು ತೆರೆಮೇಲೆ ತರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇನೆ. ದಾಸಸಾಹಿತ್ಯವನ್ನು ಪ್ರೀತಿಸುವವರು ಹಾಗೂ ಕನ್ನಡಿಗರು ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಈ ಚಿತ್ರ ಮಾಡುತ್ತಿದ್ದೇನೆ.

ರಾಘವೇಂದ್ರ ಶ್ರೀಗಳ ಪಾತ್ರವನ್ನು ರಾಯಚೂರಿನ ಸಿದ್ದಪ್ಪ ಎನ್ನುವವರು ಮಾಡುತ್ತಿದ್ದು, ವಿಠ್ಠಲನ ಪಾತ್ರಕ್ಕೆ ಅಜಿತ್‌ಕುಮಾರ್ ಆಯ್ಕೆಯಾಗಿದ್ದಾರೆ. ಜಗನ್ನಾಥದಾಸರು ಬರೆದ ಸಾಹಿತ್ಯವನ್ನೇ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಅಲ್ಲದೆ ಧಾರಾವಾಹಿಯ 32 ಕಂತುಗಳಲ್ಲಿ 25ಕ್ಕೂ ಹೆಚ್ಚು ಸಾಹಿತ್ಯವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ತಮಿಳು, ತೆಲುಗಿನಲ್ಲೂ ಕೂಡಾ ಈ ಧಾರಾವಾಹಿಯನ್ನು ಡಬ್ ಮಾಡಲಾಗುತ್ತಿದೆ. ಶ್ರೀ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಹೈದರಾಬಾದ್‌ನ ವಿವಿ ಜೋಷಿ ಕೂಡಾ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.