ಗುರು, ಮೊಬೈಲ್ ಕ್ಯಾಂಟೀನ್ ಮೂಲಕ ಬೆಂಗಳೂರಿನ ಜನರಿಗೆ ರುಚಿಯಾದ ತಿಂಡಿ-ಊಟ ಒದಗಿಸುತ್ತಿದ್ದಾರೆ. ನಿರ್ದೇಶಕನಾಗಬೇಕೆನ್ನುವ ಕನಸು ಕಿರಿಯ ವಯಸ್ಸಿನಲ್ಲಿಯೇ 'ಮೂಕ ವಿಸ್ಮಿತ' ಚಿತ್ರದ ಮೂಲಕ ನೆರವೇರಿಸಿ ಕೊಂಡ ಇವರು, ಆಕಸ್ಮಿಕವಾಗಿ ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದಾರೆ. ವಿಶೇಷ ಅಂದರೆ ಇವರು ಮೊಬೈಲ್ ಕ್ಯಾಂಟೀನ್ ಶುರುಮಾಡಲು ಕಾರಣವಾಗಿದ್ದೆ ಮೂಕವಿಸ್ಮಿತ ಚಿತ್ರ.
ಗುರುದತ್, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಟೈಂನಲ್ಲಿ ಗಾಂಧಿ ನಗರದಲ್ಲಿರುವ ಐಡಿಸಿ ಹೊಟೇಲ್ ತಿಂಡಿಗೆ ಮನಸೋತು ಕಾಯಂ ಕಸ್ಟಮರ್ ಆದರಂತೆ. ಈ ವೇಳೆ ಹೋಟೆಲ್ ಮಾಲೀಕ ರಾಘವ್ ಪರಿಚಯವಾಗುತ್ತದೆ. ಇವರ ಸ್ನೇಹ 'ಐಡಿಸಿ ಮೊಬೈಲ್ ಕ್ಯಾಂಟೀನ್' ಕಾನ್ಸೆಪ್ಟ್ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ರಾಘವ್ ಅವರ ಸಲಹೆಯಂತೆ ಮೊಬೈಲ್ ಕ್ಯಾಂಟಿನ್ ಆರಂಭಿಸಿ ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಹೋಟೆಲ್ನಲ್ಲಿ ಸುಮಾರು ಆರು ಹುಡುಗರ ನೇಮಿಸಿಕೊಂಡಿರುವ ಗುರುದತ್, ಯಾವುದೇ ಕೆಲಸ ಮಾಡಲು ಮುಜುಗರ ಪಡುವುದಿಲ್ಲ.
ಫೈವ್ ಸ್ಟಾರ್ ಹೊಟೇಲ್ಗಳಂತೆ ಹೈಜೆನಿಕ್ ಆಗಿ ಸೌತ್ ಇಂಡಿಯನ್ ಪುಡ್ ಇಲ್ಲಿ ಸಿಗುತ್ತೆ. ಪ್ಲಾಸ್ಟಿಕ್ ಬಳಸದೆ ಪರಿಸರ ಸ್ನೇಹಿ ಅಡಿಕೆ ಪ್ಲೇಟ್ ಬಳಸಿ ತಿಂಡಿಕೊಡ್ತಾರೆ. ಇವರ ಕ್ಯಾಂಟೀನ್ ಎಲ್ಲಿರುತ್ತೋ ಅಲ್ಲಿ ತುಂಬಾ ಶುಚಿತ್ವ ಕಾಪಡಿಕೊಂಡು ಬಂದಿದ್ದಾರೆ. ಇವರ ಕ್ಯಾಂಟಿನ್ ನ ಮಸಾಲೆ ಇಡ್ಲಿ ಎಂದರೆ ಪೊಲೀಸ್ ಅಧಿಕಾರಿ ಗಳಿಂದ ಹಿಡಿದು ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೂ ಅಚ್ಚು ಮೆಚ್ಚು. ದಿನಕೊಂದು ಏರಿಯಾದಲ್ಲಿ ಕ್ಯಾಂಟೀನ್ ನಡೆಸುವ ಇವರು ಈ ಬ್ಯುಸಿ ಲೈಫ್ನಲ್ಲೂ ಸಿನಿಮಾ ಕೆಲದಿಂದ ದೂರವಾಗಿಲ್ಲ. ಸದ್ಯ ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ವರ್ಕ್ನಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಐಡಿಸಿ ಜತೆಗೂಡಿ ಮೊಬೈಲ್ ಕ್ಯಾಂಟೀನ್ಗಳನ್ನು ಇಡೀ ಬೆಂಗಳೂರಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಸಿನಿಮಾ ನಿರ್ದೇಶನ ಮಡುವ ಚಿಂತನೆಯಲ್ಲಿದ್ದಾರೆ.