ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ಹೇ ಗಾಯ್ಸ್ ಹಾಡು ಸಖತ್ ಸದ್ದು ಮಾಡುತ್ತಿದೆ. ಪೊಲೀಸ್ ಡ್ರೆಸ್‌ನಲ್ಲಿ ಪ್ರಜ್ವಲ್ ಹಾಡಿಗೆ ಹಾಕಿರುವ ಸ್ಟೆಫ್ಸ್ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೀಗ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಚಿತ್ರತಂಡ ಹೇ ಗಾಯ್ಸ್ ಮ್ಯೂಸಿಕ್ ಬಳಸಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡು ಮಾಡಿದೆ. ಸೇಫ್ಟಿ ಮಾಸ್ಕ್ ಹಾಕ್ಕೊಂಡು ಓಡಾಡಿರಿ ಅಂತಾ ಗೀತೆ ರಚನೆಕಾರ ಪ್ರಮೋದ್ ಮರವಂತೆ ಬರೆದಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮಾಸ್ಕ್ ಹಾಕ್ಕೊಂಡು ಈ ಹಾಡನ್ನ ಹಾಡಿದ್ದಾರೆ.
- " class="align-text-top noRightClick twitterSection" data="">
ಕೊರೊನಾ ವೈರಸ್ ತಡೆಯೋದಿಕ್ಕೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕು, ಈ ಕೊರೊನಾ ವೈರಸ್ ಹೇಗೆ ಹರುಡುತ್ತೆ ಎಂಬುದರ ಬಗ್ಗೆ ಈ ಹಾಡಿನಲ್ಲಿ ಹೇಳಲಾಗಿದೆ.