ಬಾಲಿವುಡ್ನ ಸೋನಾಕ್ಷಿ ಸಿನ್ಹಾ ಹಿಂದಿಯಲ್ಲಿ ಮೂಡಿಬರುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಕಾರ್ಯಕ್ರಮದ ನಿರೂಪಕರಾಗಿದ್ದ ಅಮಿತಾಬ್ ಬಚ್ಚನ್, ಸೋನಾಕ್ಷಿಗೆ ರಾಮಾಯಣದಲ್ಲಿ ಹನುಮಂತ ಸಂಜೀವಿನಿಯನ್ನು ಯಾರಿಗೋಸ್ಕರ ತಂದನು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಸೋನಾಕ್ಷಿ ಉತ್ತರ ಗೊತ್ತಿಲ್ಲದೇ ಲೈಫ್ ಲೈನ್ ಪಡೆದಿದ್ದು, ಸಖತ್ ಟ್ರೋಲ್ ಗೆ ಒಳಗಾಗಿದ್ದರು.
ಇದೀಗ ಸೋನಾಕ್ಷಿ ಮೇಲೆ ಕಿಡಿಕಾರಿರುವ ಉತ್ತರ ಪ್ರದೇಶ ಸಚಿವರೊಬ್ಬರು ಸೋನಾಕ್ಷಿ "ಹಣದ ಪ್ರಾಣಿ" ಎಂದು ಕರೆದಿದ್ದಾರೆ. ಹಣದ ಪ್ರಾಣಿ ಎಂದಿರುವ ಸುನೀಲ್ ಭರಾಲ, ಈ ಕಾಲದ ಜನ ಕೇವಲ ಹಣದ ಹಿಂದೆ ಬಿದ್ದಿದ್ದಾರೆ. ಹಣ ಗಳಿಸಿ ತಮಗಾಗಿ ಬದುಕುತ್ತಿದ್ದಾರೆ. ಇವರಿಗೆ ಜ್ಞಾನ ಪಡೆಯಬೇಕೆಂಬ ಹಂಬಲ ಇಲ್ಲ. ನಮ್ಮ ಇತಿಹಾಸ ಮತ್ತು ದೇವರುಗಳ ಬಗ್ಗೆ ತಿಳಿಯುವ ಗೋಜಿಗೆ ಹೋಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಇದೇ ತಿಂಗಳ 20ರಂದು ನಡೆದ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಸೋನಾಕ್ಷಿಗೆ ರಾಮಾಯಣದಲ್ಲಿ ಬರುವ ಹನುಮ ಮತ್ತು ಲಕ್ಷ್ಮಣನ ಪ್ರಸಂಗದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರ ನೀಡಲು ಸೋನಾಕ್ಷಿ ವಿಫಲರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದ್ದರು.