ETV Bharat / sitara

ನೀಲಿ ಚಿತ್ರಗಳಲ್ಲಿ ನಟನೆ ಮಾಡುವುದು ತಪ್ಪಲ್ಲ: ಸಲ್ಮಾನ್ ಖಾನ್​ ಮಾಜಿ ಗೆಳತಿ ಸೋಮಿ ಅಲಿ - ನೀಲಿ ಚಿತ್ರಗಳಲ್ಲಿ ನಟನೆ

ನೀಲಿ ಚಿತ್ರಗಳಲ್ಲಿ ನಟನೆ ಹಾಗೂ ಅವುಗಳ ನಿರ್ಮಾಣ ಮಾಡುವುದು ತಪ್ಪಲ್ಲ ಎಂದು ಸಲ್ಮಾನ್​ ಖಾನ್​ ಮಾಜಿ ಲವರ್​ ಸೋಮಿ ಅಲಿ ಹೇಳಿದ್ದಾರೆ.

Somy Ali
Somy Ali
author img

By

Published : Jul 28, 2021, 9:31 PM IST

ನವದೆಹಲಿ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ ಬಂಧನವಾಗಿದ್ದು, ಈ ವೇಳೆ ಅವರ ವಿರುದ್ಧ ಅನೇಕ ನಟಿಯರು ವಾಗ್ದಾಳಿ ನಡೆಸಿದ್ದಾರೆ. ಇದರ ಮಧ್ಯೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ ವಿಭಿನ್ನವಾದ ಹೇಳಿಕೆ ನೀಡಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟನೆ ಮಾಡುವುದು ತಪ್ಪಲ್ಲ ಎಂದಿರುವ ಅವರು, ಅಶ್ಲೀಲ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಶ್ಲೀಲ ಚಿತ್ರಗಳಲ್ಲಿ ನಟನೆ ಮಾಡಲು ಆಯ್ಕೆ ಮಾಡಿಕೊಳ್ಳುವವರನ್ನ ನಾನು ಜಡ್ಜ್​ ಮಾಡಲ್ಲ. ಈ ಕ್ಷೇತ್ರದಲ್ಲಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರೆ ಅದು ತಪ್ಪು. ಆದರೆ ಖುದ್ದಾಗಿ ಮಹಿಳೆಯರು ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೇ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಫಂಡ್​ಗೆ 25 ಲಕ್ಷ ನೀಡಿದ್ದೇನೆ, 1 ಲಕ್ಷ ರೂ. ದಂಡ ಕಟ್ಟಲ್ಲ: ಕೋರ್ಟ್‌ಗೆ ತಿಳಿಸಿದ ದಳಪತಿ ವಿಜಯ್

ನೀಲಿ ಚಿತ್ರಗಳ ವಿಡಿಯೋ ನಿರ್ಮಾಣ ಮತ್ತು ನಿರ್ದೇಶನ ಮಾಡುವುದು ಕೂಡ ತಪ್ಪಲ್ಲ ಎಂದಿರುವ ನಟಿ, ಇದರಲ್ಲಿ ಭಾಗಿಯಾದವರಿಗೆ ಲೈಂಗಿಕ ಕಿರುಕುಳ ಹಾಗೂ ಹಣಕಾಸಿನ ತೊಂದರೆ ಮಾಡಬಾರದು ಎಂದು ಸೋಮಿ ತಿಳಿಸಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಾಜ್​ ಕುಂದ್ರಾ ಬಂಧನ ಮಾಡಿದ್ದು, ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.