ಸ್ಯಾಂಡಲ್ವುಡ್ಗೆ ದಿನೇ ದಿನೆ ಹೊಸ ಟ್ಯಾಲೆಂಟೆಡ್ ಪ್ರತಿಭೆಗಳು ಬರೋದು ಟ್ರೆಂಡ್ ಆಗಿದೆ. ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಜನರ ಬೆಂಬಲ ಸಹ ಹೆಚ್ಚೆಚ್ಚು ಸಿಕ್ತಿದೆ. ಅದರಲ್ಲೂ ಇತ್ತೀಚಿಗೆ ಹೊಸ ತಂಡ ಕಟ್ಟಿಕೊಂಡು ವಿಭಿನ್ನ ಕಥಾಹಂದರದ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಎಲ್ ಕೃಷ್ಣ ಎಂಬುವರು ಸಿನಿಮಾಗೋಸ್ಕರ, ರಂಗಭೂಮಿಯಲ್ಲಿ ಕಲಿತು ನಿರ್ದೇಶಕರಾಗಿದ್ದಾರೆ.
ಸದ್ಯ ಎಲ್ ಕೃಷ್ಣ TT # 50 ಎಂಬ ಸಿನಿಮಾವನ್ನ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. ಸಸ್ಪೆನ್ಸ್ ಕಥಾಹಂದರವುಳ್ಳ ಈ ಚಿತ್ರ, ಸಂಪೂರ್ಣವಾಗಿ ಭದ್ರಾವತಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರೋ ಎಲ್ ಕೃಷ್ಣ ಈ ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್ ಮಾಡಲು ಸಜ್ಜಾಗಿದ್ದಾರೆ.
ಯುವ ನಟರಾದ ಕರ್ಣ ಎಸ್ ರಾಮಚಂದ್ರ ಹಾಗೂ ಹೇಮಂತ್ ಕುಮಾರ್ TT # 50 ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕರ್ಣ ಎಸ್ ರಾಮಚಂದ್ರ ಮಾತನಾಡಿ, ನಾನು ಹತ್ತು ವರ್ಷದ ಹಿಂದೆ ಫೆಬ್ರವರಿ 14 ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕಾರಣಾಂತರದಿಂದ ಈ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಅಭಿನಯದ ಧಾರಾವಾಹಿ ನೋಡಿದ ನಿರ್ದೇಶಕರು ನನಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದ್ದಾರೆ ಅವರಿಗೆ ನನ್ನ ಧನ್ಯವಾದ ಅಂದರು.
ಎರಡನೇ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಂತೆ. ಒಂದು ಹಾಡಿರುವ ಈ ಚಿತ್ರಕ್ಕೆ ಮುರಳೀಧರನ್ ಸಂಗೀತ ನೀಡಿದ್ದಾರೆ. ದಿವ್ಯ ರಾಮಚಂದ್ರ ಹಾಡಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರದಲ್ಲಿ ಪರಿಣಾಮಕಾರಿಯಾಗಿದ್ದು, ಮುರಳಿಧರನ್ ಅವರೇ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಮುರಳೀಧರನ್ ಹಾಗೂ ಗಾಯಕಿ ದಿವ್ಯ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಇನ್ನು ಕಣ್ಣು ಪತ್ರಿಕೆ ಸಂಪಾದಕರಾದ ಶಿವಕುಮಾರ್ ನಾಗನವಿಲು, ನಟ ಪ್ರಶಾಂತ್ ಸಿದ್ದಿ, ಉದ್ಯಮಿ ಪ್ರದೀಪ್ ಕುಮಾರ್, ಶ್ರೀಮಂತ್ ಮಂಜು ಹಾಗೂ ನಿರ್ಮಲ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ಟೈಟಲ್ನಿಂದ ಗಮನ ಸೆಳೆಯುತ್ತಿರುವ TT # 50 ಚಿತ್ರ ಇದೇ ಅಗಸ್ಟ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.