ಸರಸು ಧಾರಾವಾಹಿಯಲ್ಲಿ ನಾಯಕ ಅರವಿಂದ್ ಆಗಿ ಅಭಿನಯಿಸುತ್ತಿರುವ ನಟ ಸ್ಕಂದ ಅಶೋಕ್ ಸದ್ಯ ಶೂಟಿಂಗ್ ನಿಂದ ವಿರಾಮ ಪಡೆದುಕೊಂಡಿದ್ದಾರೆ. ಸ್ಕಂದ ಅವರಿಗೆ ಮುದ್ದಾದ ಹೆಣ್ಣು ಮಗಳು ಜನಿಸಿದ್ದು, ಆ ಮಗು ಇತ್ತೀಚೆಗಷ್ಟೇ ಆರು ತಿಂಗಳು ಪೂರೈಸಿದೆ. ಮಗಳಿಗೆ ಆರು ತಿಂಗಳು ತುಂಬಿದ ಸಂಭ್ರಮ ಜೊತೆಯಾಗಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದೀಗ ಬ್ಯುಸಿ ಶೂಟಿಂಗ್ ನಡುವೆ ಬ್ರೇಕ್ ಪಡೆದಿರುವ ಸ್ಕಂದ ಮುದ್ದು ಮಗಳು ಮತ್ತು ಮನೆಯ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ರಜಾದ ಮಜಾವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಸ್ಕಂದ."ಫನ್ ಫ್ಯಾಮಿಲಿ ಟೈಮ್ # ಮಗಳಿಗೆ ಆರು ತಿಂಗಳು ಕಳೆಯಿತು"ಎಂದು ಬರೆದುಕೊಂಡಿದ್ದಾರೆ. ತಮ್ಮ ಪತ್ನಿ ಶಿಖಾ ಹಾಗೂ ಮುದ್ದಿನ ಮಗಳೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ಕಂದ ಸಮಯ ಕಳೆದಿದ್ದು, ಆ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ತನ್ನ ಮುದ್ದಿನ ಮಗಳೊಂದಿಗೆ ಕಾಲ ಕಳೆಯುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡದ ಸ್ಕಂದ ಶೂಟಿಂಗ್ ನಡುವೆಯೂ ಮಗಳೊಂದಿಗೆ ಕಾಲಕಳೆಯುತ್ತಾರೆ. ತಂದೆಯಾಗಿ ತನ್ನ ಕರ್ತವ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ.
ಸ್ಕಂದ ಹಂಚಿಕೊಂಡ ಈ ಫೋಟೋಗಳು ಕಮ್ಮಿ ಸಮಯದಲ್ಲಿ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಪ್ರಶಂಸೆ ಗಳಿಸಿವೆ.