ETV Bharat / sitara

ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಡ್ರಾಮಾ ಬೆಡಗಿ ಸಿಂಧು ಲೋಕನಾಥ್

author img

By

Published : Jul 8, 2020, 2:39 PM IST

ಡ್ರಾಮಾ ಹಾಗೂ ಲವ್ ಇನ್ ಮಂಡ್ಯ ಸಿನಿಮಾಗಳ ಖ್ಯಾತಿಯ ಸಿಂಧು ಲೋಕನಾಥ್, ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಸ್ಪೆಷಲ್ ಉಡುಗೊರೆ ನೀಡಿದ್ದಾರೆ. ಸೆಂಚುರಿ ಸ್ಟಾರ್ ಸಿನಿಮಾ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ರಣರಂಗ ಸಿನಿಮಾದ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ..

ಸಿಂಧು ಲೋಕನಾಥ್ ಡ್ಯಾನ್ಸ್
ಸಿಂಧು ಲೋಕನಾಥ್ ಡ್ಯಾನ್ಸ್

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ, ಕರುನಾಡ ಚಕ್ರವರ್ತಿ, ನಟ ಶಿವರಾಜ್ ಕುಮಾರ್ ಮೂರು ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿದ್ದಾರೆ. ಜುಲೈ 12ರಂದು ಅವರ ಹುಟ್ಟುಹಬ್ಬ.

ಸದ್ಯ ಕೊರೊನಾ ಹಾವಳಿಯಿಂದ ಈ ವರ್ಷವು ಕೂಡ, ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಶಿವಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಶಿವರಾಜ್‌ಕುಮಾರ್ ಕಾಮನ್ ಡಿಪಿಯನ್ನ, ‌ಕಿಚ್ಚ ಸುದೀಪ್ ಕೈಯಲ್ಲಿ ಅನಾವರಣ ಮಾಡಿಸಿದ್ದಾರೆ.

ಸಿಂಧು ಲೋಕನಾಥ್ ಡ್ಯಾನ್ಸ್ ಮಾಡಿದ ವಿಡಿಯೋ

ಡ್ರಾಮಾ ಹಾಗೂ ಲವ್ ಇನ್ ಮಂಡ್ಯ ಸಿನಿಮಾಗಳ ಖ್ಯಾತಿಯ ಸಿಂಧು ಲೋಕನಾಥ್, ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಸ್ಪೆಷಲ್ ಉಡುಗೊರೆ ನೀಡಿದ್ದಾರೆ. ಸೆಂಚುರಿ ಸ್ಟಾರ್ ಸಿನಿಮಾ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ರಣರಂಗ ಸಿನಿಮಾದ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಈ ಡ್ಯಾನ್ಸ್‌ನ ಸ್ಟುಡಿಯೋವೊಂದರಲ್ಲಿ, ಸ್ನೇಹಿತರ ಜೊತೆಗೂಡಿ ಮಾಡಿದ್ದು, ಶಿವರಾಜ್​ ಕುಮಾರ್​ ಅಭಿನಯದ ರಣರಂಗ ಚಿತ್ರದ ಜಗವೇ ಒಂದು ರಣರಂಗ, ಎಂಬ ಹಾಡಿಗೆ ಸಿಂಧು ಲೋಕನಾಥ್ ಡ್ಯಾನ್ಸ್ ಮಾಡಿ ಇದನ್ನ ಶಿವಣ್ಣ ಹಾಗೂ ಅವರ ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ. ಈ ಹಿಂದೆನೂ ಕೂಡ ಸಿಂಧು ಲೋಕನಾಥ್ ಆನಂದ್ ಸಿನಿಮಾದ ಒಂದು ಹಾಡಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.