ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಏನೋ ಒಂದು ಶಕ್ತಿ ಸಾಧನೆಗೆ ಸ್ಪೂರ್ತಿ ಸರಳತೆ ಎಲ್ಲವೂ ಇದೆ. ಸೂಪರ್ ಸ್ಟಾರ್ ಪಟ್ಟ ಇದ್ರು ಸರಳತೆಯ ಸಾಮ್ರಾಟ ನಾಗಿ ಜೀವನ ಸಾಗಿಸುತ್ತಿರುವ ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ ಎಂದು ಟರ್ನಿಂಗ್ ಪಾಯಿಂಟ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಜ್ ಬಹುದ್ದೂರ್ ಹೇಳಿದರು.
ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ತನ್ನ ನಟನೆಯ ಶಕ್ತಿಯಿಂದ ಇಂದು ಇಂಡಿಯಾದಲ್ಲಿ ಮಾತ್ರ ಅಲ್ಲದೆ ಎಂಟೈರ್ ವರ್ಲ್ಡ್ ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಈ ತಲೈವಾಗೆ ಬೆಂಗಳೂರು ಅಂದ್ರೆ ಅಚ್ಚುಮೆಚ್ಚು.
ಅದೆಷ್ಟು ದೊಡ್ಡ ನಟನಾಗಿದ್ದರೂ ಸಹ ರಜಿನಿಕಾಂತ್ ಬೆಂಗಳೂರಿಗೆ ಬಂದರೆ ತನ್ನ ಪ್ರಾಣ ಸ್ನೇಹಿತ ರಾಜ್ ಬಹುದೂರ್ ಅವರನ್ನು ನೋಡಲು ನೇರವಾಗಿ ಅವರ ಮನೆಗೆ ಹೋಗ್ತಾರಂತೆ. ಇವರ ನಡುವಿನ ಸ್ನೇಹದ ಕುರಿತು ರಾಜ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇಂದಿನ ಹೊಸಬರು ನಾಳೆ ಸೂಪರ್ ಸ್ಟಾರ್ಗಳಾಗಬಹುದು. ಚಿಕ್ಕಪುಟ್ಟ ಪಾತ್ರಗಳು ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಪಟ್ಟ ಗಳಿಸಿದ್ದು, ಇದಕ್ಕೆ ಅವರಲ್ಲಿರುವ ಸರಳತೆಯೇ ಕಾರಣ. ಅವರಲ್ಲಿರುವ ಸರಳತೆ ಇಂದಿನ ನಟರಿಗೆ ಮಾದರಿಯಾಗಬೇಕೆಂದು ಹೇಳಿದರು.
ಈಗಿನ ನಟರು ನಾಲ್ಕೈದು ಸಿನಿಮಾ ಮಾಡಿ ಬಿಟ್ಟರೆ ಸಾಕು ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾರೆ. ಆದರೆ ರಜನಿಕಾಂತ್ ಬೆಂಗಳೂರಿಗೆ ಬಂದರೆ ನಾನೊಬ್ಬನೇ ಅವರ ಜೊತೆಯಲ್ಲಿ ಇರುತ್ತೇನೆ, ಆರಾಮಾಗಿ ತನಗಿಷ್ಟ ಬಂದ ಜಾಗದಲ್ಲಿ ಸುತ್ತಾಡುತ್ತಾರೆ ಎಂದು ರಜನಿಕಾಂತ್ ಅವರ ಸರಳತೆಯನ್ನು ರಾಜ್ ಬಿಚ್ಚಿಟ್ರು.