ಕಿರಿಕ್ ಹುಡುಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಬೇಟೆಯಾಡಿದೆ.
ಈಗಾಗಲೇ 30 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿರುವ 'ಅವನೇ ಶ್ರೀಮನ್ನಾರಾಯಣ' ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ 100 ಕೋಟಿ ರೂ. ಹಣ ದೋಚಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ರಕ್ಷಿತ್ ಶೆಟ್ಟಿ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಮಾತನಾಡುವಾಗ ತಿಳಿಸಿದ್ರು. ಈ ಚಿತ್ರದಲ್ಲಿ ದೊಡ್ಡ ಸಕ್ಸಸ್ ಕಂಡ ನಂತರ ಸಿಂಪಲ್ ಸ್ಟಾರ್ ಮತ್ತೆ ಎರಡು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಹೌದು, 'ಅವನೇ ಶ್ರೀಮನ್ನಾರಾಯಣ' ಚಿತ್ರದ ಯಶಸ್ಸಿನಲ್ಲಿರುವ ಶೆಟ್ರು, "ಚಾರ್ಲಿ 777" ಹಾಗೂ "ಪುಣ್ಯಕೋಟಿ" ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಚಾರ್ಲಿ ಚಿತ್ರವನ್ನು ಖಂಡಿತ ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಮಾಡ್ತಿವಿ. ಯಾಕಂದ್ರೆ ಅಲ್ ಓವರ್ ವರ್ಲ್ಡ್ನಲ್ಲಿ ನಾಯಿ ಪ್ರಿಯರು ಹೆಚ್ಚಿದ್ದಾರೆ. ಆದ್ದರಿಂದ 'ಚಾರ್ಲಿ 777' ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ. ಜೊತೆಗೆ 'ಪುಣ್ಯಕೋಟಿ' ಕತೆಯೂ ಕೂಡ ಯೂನಿವರ್ಸಲ್ ಆಗಿದೆ. ಆದ್ದರಿಂದ 'ಪುಣ್ಯಕೋಟಿ' ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮವಾಗಿ ಬಿಡುಗಡೆ ಮಾಡುತ್ತೇವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇನ್ನು 'ರಿಚಿ' ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡುತ್ತೇವೋ , ಇಲ್ವೋ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ನಮಗೆ ಪ್ಲಾನ್ ಇಲ್ಲ. ಅಲ್ಲದೆ ಎಲ್ಲಾ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ರು.