ETV Bharat / sitara

ಕೊನೆಗೂ ನಾಲ್ಕು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ ಶ್ವೇತಾ ಶ್ರೀವಾತ್ಸವ್​​​​​​​​​​​​​​​​​​​​​​ - Shwetha Srivatsav acting after 4 years

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್​ ಬರೋಬ್ಬರಿ 4 ವರ್ಷಗಳ ನಂತರ ಬಣ್ಣ ಹಚ್ಚಿದ್ದಾರೆ. ಅವರು ಒಪ್ಪಿಕೊಂಡಿದ್ದ 'ರಹದಾರಿ' ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಈ ನಡುವೆ ಶ್ವೇತಾ 'ಹೋಪ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ.

Shwetha Srivatsav
ಶ್ವೇತಾ ಶ್ರೀವಾತ್ಸವ್​​​​​​​​​​​​​​​​​​​​​​
author img

By

Published : Dec 22, 2020, 7:11 AM IST

'ಕಿರಗೂರಿನ ಗಯ್ಯಾಳಿಗಳು' ಚಿತ್ರದ ನಂತರ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಅಭಿನಯದ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಆ ಚಿತ್ರದ ನಂತರ ಅಮ್ಮನಾದ ಶ್ವೇತಾ, ಮಗಳು ಅಶ್ಮಿತಾ ಆರೈಕೆಯಲ್ಲೇ ಬ್ಯುಸಿಯಾಗಿ ಹೋದರು. ಆದ್ದರಿಂದ ಅವರು ಯಾವುದೇ ಚಿತ್ರಗಳಲ್ಲಿ ನಟಿಸಲಾಗಲಿಲ್ಲ.

ಇದನ್ನೂ ಓದಿ: ಬೆಳ್ಳಿತೆರೆಗೆ 'ಲಾಂಗ್ ಡ್ರೈವ್' ಹೊರಟ ಕಿರುತೆರೆ ನಟಿ ತೇಜಸ್ವಿನಿ

ಶ್ವೇತಾ ಮತ್ತೆ ಸಿನಿಮಾಗೆ ಬರುತ್ತಿದ್ದಾರೆ, 'ರಹದಾರಿ' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಇದೀಗ ಶ್ವೇತಾ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 'ಹೋಪ್' ಎಂಬ ಚಿತ್ರದಲ್ಲಿ ಶ್ವೇತಾ ನಟಿಸುತ್ತಿದ್ದು ಕೊನೆಗೂ ಅವರು ಮೇಕಪ್ ಹಾಕಿಕೊಂಡು ನಾಲ್ಕು ವರ್ಷಗಳ ನಂತರ ಕ್ಯಾಮರಾ ಮುಂದೆ ನಿಂತಿದ್ದಾರೆ. ಈ ಚಿತ್ರದಲ್ಲಿ ಶ್ವೇತಾ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದು ತಮ್ಮ ಪಾತ್ರದ ಬಗ್ಗೆ ಅವರು ಬಹಳ ಥ್ರಿಲ್ ಆಗಿದ್ದಾರೆ. ಇಂಥದ್ದೊಂದು ಕಥೆಯನ್ನು ಪ್ರೇಕ್ಷಕರಿಗೆ ಹೇಳಬೇಕಾದ ಅಗತ್ಯ ಹೆಚ್ಚಿದೆ ಎಂಬುದು ಶ್ವೇತಾ ಅವರ ಅಭಿಪ್ರಾಯ. ಅದೇ ಕಾರಣಕ್ಕೆ ಅವರು ಈ ಚಿತ್ರವನ್ನು ಒಪ್ಪಿಕೊಂಡರಂತೆ. ಈ ಕಥೆ ತಮ್ಮ ರೀಎಂಟ್ರಿಗೆ ಹೇಳಿ ಮಾಡಿಸಿದಂತಿದೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ಹೇಳುತ್ತಾರೆ. ಈ ಮಹಿಳಾ ಪ್ರಧಾನ ಚಿತ್ರವನ್ನು ಅಂಬರೀಶ್​ ಎನ್ನುವವರು ನಿರ್ದೇಶಿಸುತ್ತಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಅವರೇ ರಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.