ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಆದ್ರೆ ಇದೀಗ ಚಿತ್ರತಂಡ ಆ ಕತೂಹಲಕ್ಕೆ ತೆರೆ ಎಳೆದಿದ್ದು, ಸಲಾರ್ ನಾಯಕಿ ಯಾರೆಂದು ಘೋಷಿಸಿದೆ.
ಹೌದು, ತೆಲುಗು ತಾರೆ ಶೃತಿ ಹಾಸನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಶೃತಿಗೆ ಸಲಾರ್ ಚಿತ್ರತಂಡ ದೊಡ್ಡ ಗಿಫ್ಟ್ ನೀಡಿದ್ದು, ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಲು ಅವಕಾಶ ಕೊಟ್ಟಿದೆ. ಈ ಮೂಲಕ ಸಲಾರ್ ಅಭಿಮಾನಿಗಳಿಗೂ ಇಷ್ಟು ದಿನ ಇದ್ದ ಕುತೂಹಲ ಮರೆಯಾಗಿದೆ.
-
Wish you a very happy birthday @shrutihaasan 🎉
— Hombale Films (@hombalefilms) January 28, 2021 " class="align-text-top noRightClick twitterSection" data="
We're ecstatic to have you onboard for #Salaar. Can't wait to see you sizzle on the screen. #Prabhas @prashanth_neel @VKiragandur @hombalefilms pic.twitter.com/Zkx5xL3YmP
">Wish you a very happy birthday @shrutihaasan 🎉
— Hombale Films (@hombalefilms) January 28, 2021
We're ecstatic to have you onboard for #Salaar. Can't wait to see you sizzle on the screen. #Prabhas @prashanth_neel @VKiragandur @hombalefilms pic.twitter.com/Zkx5xL3YmPWish you a very happy birthday @shrutihaasan 🎉
— Hombale Films (@hombalefilms) January 28, 2021
We're ecstatic to have you onboard for #Salaar. Can't wait to see you sizzle on the screen. #Prabhas @prashanth_neel @VKiragandur @hombalefilms pic.twitter.com/Zkx5xL3YmP
35ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಶೃತಿ ಹಾಸನ್ಗೆ ದೇಶಾದ್ಯಂತ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಸಲಾರ್ ಟೀಂ ಕೂಡ ವಿಶ್ ಮಾಡಿದ್ದು, ಸಲಾರ್ ಚಿತ್ರತಂಡಕ್ಕೆ ಸ್ವಾಗತ ಎಂದು ಪೋಸ್ಟರ್ ರಿಲೀಸ್ ಮಾಡಿದೆ.
ಇನ್ನು ನಟ ಪ್ರಭಾಸ್ ಕೂಡ ಶೃತಿಗೆ ವಿಶ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಹಾಸನ್. ನಿಮ್ಮ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.