ತೆಲುಗಿನ ಸಾಲು ಸಾಲು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇದೀಗ ತೆಲುಗಿನ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು ಇದೇ 23 ರಂದು ಸಂಜೆ 6 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
- " class="align-text-top noRightClick twitterSection" data="
">
ಶ್ರದ್ಧಾ ಶ್ರೀನಾಥ್ ಹಾಗೂ ನಾಣಿ ನಟಿಸಿರುವ ತೆಲುಗಿನ ಹಿಟ್ ಸಿನಿಮಾ 'ಜೆರ್ಸಿ' ಕನ್ನಡಕ್ಕೆ 'ಜರ್ಸಿ' ಆಗಿ ಡಬ್ ಆಗಿದೆ. ಈಗಾಗಲೇ ಈ ಚಿತ್ರದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿನಿಪ್ರಿಯರು ಈ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನಾಯಕ ಅರ್ಜುನ್ ಒಬ್ಬ ಪ್ರತಿಭಾವಂತನಾಗಿರುತ್ತಾನೆ. ಕ್ರಿಕೆಟ್ ಎಂದರೆ ಬಹಳ ಇಷ್ಟಪಡುವ ಆತ ಆಟದಲ್ಲಿ ವಿಫಲನಾಗಿರುತ್ತಾನೆ. ಸುಮಾರು 30 ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯುವ ಆತ ಮತ್ತೆ ಕ್ರಿಕೆಟ್ ಆಡಲು ಆರಂಭಿಸುತ್ತಾನೆ. ಅದರಲ್ಲಿ ಆತ ಯಶಸ್ವಿಯಾಗುತ್ತಾನಾ ಎಂಬುದೇ ಚಿತ್ರದ ಕಥೆ. ಗೌತಮ್ ತಿನ್ನನೂರಿ ನಿರ್ದೇಶನದ 'ಜೆರ್ಸಿ' ಸಿನಿಮಾ 2019ರಲ್ಲಿ ಬಿಡುಗಡೆಯಾಗಿದ್ದು ಆ ವರ್ಷದ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿತ್ತು. ನಾಣಿ , ಶ್ರದ್ದಾ ಶ್ರೀನಾಥ್ , ಹರೀಶ್ ಕಲ್ಯಾಣ್, ಸನುಷಾ , ಸಂಪತ್ ರಾಜ್ , ಸತ್ಯರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.