ಕೆಜಿಎಫ್ ಸಿನಿಮಾ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಗಿರ್ಮಿಟ್ ಸಿನಿಮಾವನ್ನು ಮಾಡ್ತಾ ಇರೋದು ಗೊತ್ತಿರುವ ವಿಚಾರ. ಟ್ರೇಲರ್ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಗಿರ್ಮಿಟ್, ಮಕ್ಕಳ ಸಿನಿಮಾ ಆದ್ರೂ ಪಕ್ಕಾ ಕಮರ್ಷಿಯಲ್ ಚಿತ್ರದಂತೆ ಚಿತ್ರೀಕರಣಗೊಂಡಿದೆ.
ಈ ಬಗ್ಗೆ ಮಾತನಾಡಿದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಇಂತಹ ಒಳ್ಳೆ ಪ್ರಯತ್ನ ಕನ್ನಡದಲ್ಲಿ ಮಾಡುತ್ತಿರುವುದು ಒಳ್ಳೆಯ ವಿಚಾರ. ರವಿ ಬಸ್ರೂರು ಇಂತಹ ಚಿತ್ರ ತಂದಿರುವುದು ವಿಶೇಷವಾಗಿದೆ. ಸಿನಿಮಾಕ್ಕೆ ಯಶ್, ರಾಧಿಕಾ, ರಂಗಾಯಣ ರಘು ಸೇರಿದಂತೆ ಹಲವು ನಟರು ಧ್ವನಿ ನೀಡಿದ್ದಾರೆ. ನನಗೂ ಅವಕಾಶ ಸಿಕ್ಕಿದ್ದರೆ ನಾನು ಧ್ವನಿ ನೀಡುತ್ತಿದ್ದೆ ಎಂದು ಶಿವಣ್ಣ ಸಂತೋಷ ವ್ಯಕ್ತಪಡಿಸಿದ್ರು.
ಇದೇ ವೇಳೆ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿರುವ ಆಶ್ಲೇಷ್ ರಾಜ್ ಹಾಗೂ ನಾಯಕಿ ಪಾತ್ರ ಮಾಡಿರೋ ಶ್ಲಾಘಾ ಸಾಲಿಗ್ರಾಮ ಸಖತ್ ಡೈಲಾಗ್ ಹೊಡೆದಿದ್ದು, ಶಿವಣ್ಣ ಡೈಲಾಗ್ಗೆ ಫುಲ್ ಫಿದಾ ಆದ್ರು.
ಇನ್ನು ಈ ಚಿತ್ರದಲ್ಲಿ ಆಕ್ಷನ್, ಲವ್ ಎಲಿಮೆಟ್ಸ್ ಇದ್ದು, ಚಿತ್ರ ಪಕ್ಕಾ ಕಮರ್ಶಿಯಲ್ ಆಗಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಹೀರೋ, ಹೀರೋಯಿನ್, ಖಳನಟ ಹಾಗೂ ಸ್ನೇಹಿತರ ಪಾತ್ರಗಳನ್ನ ಮಕ್ಕಳಿಂದ ಮಾಡಿಸಲಾಗಿದೆ. ಸಿನಿಮಾದಲ್ಲಿ 280ಕ್ಕೂ ಹೆಚ್ಚು ಮಕ್ಕಳು ನಟಿಸಿದ್ದು, ಮಕ್ಕಳ ಧ್ವನಿಯಾಗಿ ಸ್ಯಾಂಡಲ್ವುಡ್ ನಟರು ಡೈಲಾಗ್ ಹೇಳಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೇ 8ರಂದು ಸಿನಿಮಾ ತೆರೆ ಮೇಲೆ ಕಾಣಲಿದೆ.