ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 123ನೇ ಸಿನಿಮಾಕ್ಕೆ ಅಂತೂ ಟೈಟಲ್ ಫಿಕ್ಸ್ ಆಗಿದೆ. ಇಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಚಿತ್ರದ ಹೆಸರು ಬಹಿರಂಗವಾಗಿದೆ.
ಡಾಲಿ ಧನಂಜಯ್, ಪೃಥ್ವಿ ಅಂಬರ್ ಮತ್ತು ಶಿವಣ್ಣ ಕಾಂಬಿನೇಷನ್ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕೆ 'ಶಿವಪ್ಪ' ಎಂಬ ಮಾಸ್ ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ಎಸ್ ಡಿ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕೃಷ್ಣ ಸಾರ್ಥಕ್ ಬಂಡವಾಳ ಹಾಕುತ್ತಿದ್ದಾರೆ.
ಇಂದು ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಇದೊಂದು ಸಾಮಾಜಕ್ಕೆ ಸಂದೇಶ ಸಾರುವ ಚಿತ್ರವಾಗಿದೆ. ಚಿತ್ರದಲ್ಲಿ ಪೃಥ್ವಿ, ಶಶಿಕುಮಾರ್, ಉಮಾಶ್ರೀ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ ಎಂದು ಹೇಳಿದ್ರು.
ಚಿತ್ರಕ್ಕೆ ಶಿವಪ್ಪ ಎಂಬ ಹೆಸರು ಇಟ್ಟಾಗಿದ್ದು, ಇದೀಗ ಈ ಸಿನಿಮಾವು ಶಿವರಾಜ್ ಕುಮಾರ್ ಅವರನ್ನು ಕೇಂದ್ರೀಕರಿಸಿ ನಿರ್ಮಾಣವಾಗುತ್ತಿದೆಯಾ ಎಂಬ ಕುತೂಹಲ ಪ್ರೇಕ್ಷಕ ಪ್ರಭುಗಳಿಗೆ ಮೂಡುತ್ತಿದೆ.