ಹೈದರಾಬಾದ್: ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಮುಂಬರುವ ಸಿನಿಮಾ'ಬೇಧಡಕ್' ನಲ್ಲಿ ಮೂರು ಹೊಸ ಮುಖಗಳನ್ನು ಪರಿಚಯಿಸಿದ್ದಾರೆ.
'ಬೇಧಡಕ್' ಚಿತ್ರದ ಪೋಸ್ಟರ್‌ಗಳನ್ನು ಕರಣ್ ಜೋಹರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಶಾಂಕ್ ಖೈತಾನ್ ನಿರ್ದೇಶನದ ಈ ಚಿತ್ರದಲ್ಲಿ ಶನಯಾ ಕಪೂರ್, ಲಕ್ಷ್ಯ ಮತ್ತು ಗುರ್ಫತೇ ಪಿರ್ಜಾದಾ ನಟಿಸುತ್ತಿದ್ದು, ಈ ಮೂವರಿಗೂ ಇದು ಮೊದಲನೇ ಸಿನಿಮಾವಾಗಿದೆ. ಶನಯಾ ಕಪೂರ್ ನಟ ಸಂಜಯ್ ಕಪೂರ್ ಅವರ ಮಗಳು.
-
We’re bringing to you a new era of love - one that’s filled with passion, intensity & boundaries that will be crossed…#Bedhadak!❤️
— Karan Johar (@karanjohar) March 3, 2022 " class="align-text-top noRightClick twitterSection" data="
Starring, our latest addition to the Dharma Family - #Lakshya, @shanayakapoor & @gurfatehpirzada! Directed by the exceptional #ShashankKhaitan. pic.twitter.com/5FIAzcfZWm
">We’re bringing to you a new era of love - one that’s filled with passion, intensity & boundaries that will be crossed…#Bedhadak!❤️
— Karan Johar (@karanjohar) March 3, 2022
Starring, our latest addition to the Dharma Family - #Lakshya, @shanayakapoor & @gurfatehpirzada! Directed by the exceptional #ShashankKhaitan. pic.twitter.com/5FIAzcfZWmWe’re bringing to you a new era of love - one that’s filled with passion, intensity & boundaries that will be crossed…#Bedhadak!❤️
— Karan Johar (@karanjohar) March 3, 2022
Starring, our latest addition to the Dharma Family - #Lakshya, @shanayakapoor & @gurfatehpirzada! Directed by the exceptional #ShashankKhaitan. pic.twitter.com/5FIAzcfZWm
ಈ ಸಿನಿಮಾದಲ್ಲಿ ಶನಯಾ ಕಪೂರ್ 'ನಿಮೃತ್' ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗುರ್ಫತೇ ಪಿರ್ಜಾದಾ 'ಅಗಂಡ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಲಕ್ಷ್ಯ ಲಾಲ್ವಾನಿ 'ಕರಣ್' ಆಗಿ ಮಿಂಚಲಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿ ಶಶಾಂಕ್ ಖೈತಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ಜಂಟಿಯಾಗಿ ನಿರ್ಮಿಸಿದ್ದಾರೆ.