ಕನ್ನಡ ಚಿತ್ರಂಗದಲ್ಲಿ 70-80 ಕಾಲಘಟ್ಟದಲ್ಲೇ ವಿಭಿನ್ನತೆ ತೋರಿಸಿದ್ದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್. 1976ರಲ್ಲಿ ಐದು ಬೇರೆ ಬೇರೆ ಕಥೆಗಳನ್ನ ಒಟ್ಟುಗೂಡಿಸಿ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಹೆಸರಿನಲ್ಲಿ ಸಿನಿಮಾ ಮಾಡಿದ್ದರು.ಇದೀಗ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೇ ಟೈಟಲ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಶೆಟ್ಟರ ಕಥಾ ಸಂಗಮ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಈ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು.
ನಿರ್ದೇಶಕ ರಿಷಬ್ ಶೆಟ್ಟಿ, ನಟ ರಾಜ್ ಬಿ ಶೆಟ್ಟಿ, ಟಿ ಹರಿಪ್ರಿಯಾ, ಏಳು ಜನ ನಿರ್ದೇಶಕರು ಹಾಗೂ ನಿರ್ಮಾಪಕರು ಉಪಸ್ಥಿತರಿದ್ದರು. ಏಳು ಜನ ನಿರ್ದೇಶಕರು ಆಕ್ಷನ್ ಕಟ್ ಹೇಳಿರೋ ಕಥಾ ಸಂಗಮ ಚಿತ್ರಕ್ಕೆ ಫೈನಲ್ ಡೈರೆಕ್ಷನ್ ಮಾಡಿದ್ದಾರೆ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ.
ಏಳು ಕಥೆಗಳು, ಏಳು ಸಂಗೀತ ನಿರ್ದೇಶಕರು, ಏಳು ಛಾಯಗ್ರಾಹಕ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಕರಣ್ ಅನಂತ್, ಸುಮಂತ್ ಭಟ್, ರಾಹುಲ್ ಪಿ.ಕೆ, ಶಶಿಕುಮಾರ್. ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಕರಾಗಿದ್ದಾರೆ.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹರಿಪ್ರಿಯಾ ಮೊದಲ ಬಾರಿಗೆ ಡೈಲಾಗ್ ಇಲ್ಲದೆ ಅಭಿನಯಿಸಿದ್ದಾರೆ. ನವೆಂಬರ್ 4ರಂದು ಕಥಾ ಸಂಗಮ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದ್ದು ನವೆಂಬರ್ ಕೊನೆ ವಾರದಲ್ಲಿ ಚಿತ್ರದ ತೆರೆಕಾಣಲಿದೆ.