ETV Bharat / sitara

‘ಮಿಲನ’ ಪ್ರಕಾಶ್ ತಂದೆ ಖ್ಯಾತ ನಿರ್ಮಾಪಕ ಸಿ ಜಯರಾಂ ನಿಧನ - Senior producer C Jayaram .

ಹಲವು ಹಿಟ್ ಚಿತ್ರಗಳನ್ನ ಸ್ಯಾಂಡಲ್​​ವುಡ್​ಗೆ ನೀಡಿದ್ದ ನಿರ್ಮಾಪಕ ಸಿ.ಜಯರಾಂ ನಿಧನರಾಗಿದ್ದಾರೆ. ಅವರಿಗೆ 82 ವರ್ಷವಾಗಿದ್ದು, 70ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಮರೆಯಲಾಗದ ಸಿನಿಮಾಗಳ ನಿರ್ಮಿಸಿದ್ದರು.

senior-producer-c-jayaram-passes-away
‘ಮಿಲನ’ ಪ್ರಕಾಶ್ ತಂದೆ ಖ್ಯಾತ ನಿರ್ಮಾಪಕ ಸಿ ಜಯರಾಂ ನಿಧನ
author img

By

Published : Sep 9, 2021, 10:59 AM IST

ಕನ್ನಡ ಚಿತ್ರರಂಗದ 70ರ ದಶಕದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ.ಜಯರಾಂ ನಿಧನರಾಗಿದ್ದಾರೆ. ತಡರಾತ್ರಿ ಬೆಂಗಳೂರಿನ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅಭಿನಯದ ಗಲಾಟೆ ಸಂಸಾರ, ಶ್ರೀನಾಥ್ ಹಾಗೂ ಆರತಿ ನಟನೆಯ ಪಾವನ ಗಂಗ, ಹಾವು ಅನಂತ್ ನಾಗ್ ಅಭಿನಯದ ನಾ ನಿನ್ನ ಬಿಡಲಾರೆ, ಶಂಕರ್ ನಾಗ್ ನಟನೆಯ ಆಟೋರಾಜ, ಸೇರಿದಂತೆ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಸಿ.ಜಯರಾಂ ಅವರು ನಿರ್ಮಿಸಿದ್ದರು.

ಇನ್ನು ಸಿ ಜಯರಾಂ ಅವ್ರಿಗೆ ಮಗ ಮಿಲನ ಪ್ರಕಾಶ್ ಹಾಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಪತ್ನಿ ಜಯಮ್ಮ ಅವರನ್ನ ಬಿಟ್ಟು ಅಗಲಿದ್ದಾರೆ. ಇನ್ನು ಅವರ ಮಗ ಮಿಲನ‌ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಸಿ.ಜಯರಾಂ ಮಗ ಪ್ರಕಾಶ್ ಹೇಳುವ ಹಾಗೆ ಅವರ ತಂದೆಗೆ 82 ವರ್ಷವಾಗಿತ್ತು. ಸಹಜವಾಗಿ ತಂದೆ‌ ನಿಧನರಾಗಿದ್ದಾರೆ. ಜಯರಾಂ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ನೆರೆವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.