ETV Bharat / sitara

ವಿಜಯ ರಾಘವೇಂದ್ರ ನಟನೆಯ 'ಸೀತಾರಾಮ್‌ ಬಿನೋಯ್‌' ರಿಲೀಸ್‌ ಡೇಟ್‌ ಫಿಕ್ಸ್‌ - Sandalwood latest News

ನಟ ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ ಸೀತಾರಾಮ್ ಬಿನೋಯ್ ಮೊದಲು ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮರುದಿನ ಥಿಯೇಟರ್​ನಲ್ಲಿ ರಿಲೀಸ್​ ಆಗಲಿದೆ.

Seetharam Binoy
ನಟ ವಿಜಯ್ ರಾಘವೇಂದ್ರ
author img

By

Published : Aug 4, 2021, 6:45 AM IST

ನಟ ವಿಜಯ ರಾಘವೇಂದ್ರ ಅವರು ಸೀತಾರಾಮ್ ಬಿನೋಯ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿತ್ತು. ಆ ನಂತರ ಚಿತ್ರ ಏನಾಯಿತು ಎಂಬ ಬಗ್ಗೆ ಚಿತ್ರತಂಡದವರು ಹೆಚ್ಚು ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ಚಿತ್ರದ ಬಗ್ಗೆ ಒಂದು ಲೇಟೆಸ್ಟ್ ಸುದ್ದಿಯೊಂದು ಹೊರಬಂದಿದ್ದು, ಅದರಂತೆ ಚಿತ್ರವು ಆಗಸ್ಟ್ 15ರಂದು ಸ್ಟಾರ್ ಸುವರ್ಣದಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ.

ಟಿವಿಯಲ್ಲೇ ನೇರವಾಗಿ ಸಿನಿಮಾಗಳು ಬಿಡುಗಡೆಯಾದ ಒಂದೆರಡು ಉದಾಹರಣೆಗಳು ಸಿಗುತ್ತವೆ. ಆದರೆ, ಆ ಚಿತ್ರಗಳು ಚಿತ್ರಮಂದಿರಕ್ಕೆ ಬರುವುದಿಲ್ಲ. ಆದರೆ, ಸೀತಾರಾಮ್ ಬಿನೋಯ್ ಚಿತ್ರವು ಟಿವಿಯಲ್ಲಿ ಬಿಡುಗಡೆಯಾದ ಮರುದಿನವೇ ಚಿತ್ರಮಂದಿರದಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಆಗಸ್ಟ್ 15ರಂದು ಚಾನಲ್​ನಲ್ಲಿ ಪ್ರಸಾರವಾದ ಮರುದಿನವೇ ಅಂದರೆ ಆ.16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದಂತೆ.

ಸೀತಾರಾಮ್ ಬಿನೋಯ್ ಎಂಬ ಶೀರ್ಷಿಕೆಗೆ ಕೇಸ್ ನಂ 18 ಎಂಬ ಅಡಿಬರಹವಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಇನ್​ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಚಿತ್ರ ಒಂದು ಕೊಲೆಯ ತನಿಖೆಯ ಸುತ್ತ ನಡೆಯಲಿದೆ. ಆ ತನಿಖೆಯ ಸಂದರ್ಭದಲ್ಲಿ ಸೀತಾರಾಮ್ ಬಿನೋಯ್ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದರ ಕುರಿತಾಗಿ ಚಿತ್ರದ ಕಥೆಯಿದೆ.

ಸೀತಾರಾಮ್ ಬಿನೋಯ್ ಚಿತ್ರವನ್ನು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ್ದು, ಕಥೆ-ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ಈ ಚಿತ್ರವನ್ನು ದೇವಿ ಪ್ರಸಾದ್ ಶೆಟ್ಟಿ, ಸಾತ್ವಿಕ್ ಹೆಬ್ಬಾರ್ ಮತ್ತು ಎಂಆರ್ಪಿ ಜತೆಯಾಗಿ ನಿರ್ಮಿಸಿದ್ದು, ಇದು ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ ಎಂಬುದು ಇನ್ನೊಂದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.