ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಈ ನಡುವೆ ಸಂಜನಾ ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.
ವೈದ್ಯರೊಬ್ಬರೊಂದಿಗೆ ಸಂಜನಾ ಗಲ್ರಾನಿ ಲಿವಿಂಗ್ ರಿಲೇಷನ್ನಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಂಜನಾ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ನಿವಾಸಿಗಳು ಸಂಜನಾ ಬಗ್ಗೆ ಆರೋಪಿಸಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಡಾಕ್ಟರ್ ಜೊತೆ ಸಂಜನಾ ಲಿವಿಂಗ್ ರಿಲೇಷನ್ನಲ್ಲಿದ್ದರು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಅಲ್ಲದೆ, ಸಂಜನಾ ಆಗ್ಗಾಗ್ಗೆ ಪಾರ್ಟಿ ಮಾಡಿಕೊಂಡು ನೆರೆಹೊರೆಯವರಿಗೆ ಬಹಳ ಕಿರಿಕಿರಿಯುಂಟುಮಾಡುತ್ತಿದ್ದರು. ಯಾವ ಪಾರ್ಟಿ ಮಾಡಿದರೂ ಅಲ್ಲಿ ಆ ಡಾಕ್ಟರ್ ಹಾಜರಿರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಆದರೆ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿ ಬರುತ್ತಿದ್ದಂತೆ ಆ ಡಾಕ್ಟರ್ ಎಲ್ಲೂ ಕಾಣುತ್ತಿಲ್ಲ ಎನ್ನಲಾಗುತ್ತಿದೆ. ಸಂಜನಾಗೆ ಅಪಾರ್ಟ್ಮೆಂಟ್, ಬಿಎಂಡಬ್ಲ್ಯೂ ಕಾರು ಕೊಡಿಸಿದವರು ಯಾರು ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಸಂಜನಾಗೆ ಮದುವೆಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ರಾಹುಲ್ ತಂದೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದರು.
ಇದೇ ವರ್ಷ ಜನವರಿಯಂದು ಸಂಜನಾ ತಮ್ಮ ಅಪಾರ್ಟ್ಮೆಂಟ್ನಲ್ಲಿ ರಾಹುಲ್ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಬರ್ತ್ಡೇ ಪಾರ್ಟಿಯಲ್ಲಿ ಕೂಡಾ ಸಂಜನಾ ಜೊತೆ ಆ ಡಾಕ್ಟರ್ ಇರುವುದು ಕಂಡುಬಂದಿದೆ. ಒಟ್ಟಿನಲ್ಲಿ ಈ ಡ್ರಗ್ಸ್ ಪ್ರಕರಣ, ನಟಿಯರ ಬಗ್ಗೆ ಇನ್ನ್ಯಾವ ಸೀಕ್ರೇಟ್ ಹೊರತರುವುದೋ ಕಾದು ನೋಡಬೇಕು.