ಸ್ಯಾಂಡಲ್ವುಡ್ನಲ್ಲಿ ಫೋಟೋಗಳಿಂದಲೇ ಸಖತ್ ಟಾಕ್ ಆಗುತ್ತಿರುವ ಸಿನಿಮಾ ಲವ್ ಯು ರಚ್ಚು. ಕೃಷ್ಣ ಅಜಯ್ ರಾವ್ ಹಾಗು ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿರುವ ಲವ್ ಯು ರಚ್ಚು ಸಿನಿಮಾವನ್ನು ಸ್ಯಾಂಡಲ್ವುಡ್ ತಾರೆಯರು ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹೌದು, ಈ ಸಿನಿಮಾದ ಕ್ರಿಯೇಟಿವ್ ಹೆಡ್ ಹಾಗು ನಿರ್ಮಾಪಕರಾಗಿರುವ ಗುರು ದೇಶಪಾಂಡೆ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರರಂಗದ ಸ್ನೇಹಿತರಿಗಾಗಿ ಪ್ರಿಮಿಯರ್ ಶೋ ಅನ್ನು ಹಮ್ಮಿಕೊಂಡಿದ್ದರು.
ಈ ಸ್ಪೆಷಲ್ ಶೋಗೆ ಡಾರ್ಲಿಂಗ್ ಕೃಷ್ಣ, ಪತ್ನಿ ಮಿಲನಾ ನಾಗರಾಜ್, ಸಿಂಧು ಲೋಕನಾಥ್, ಶ್ರೀನಗರ ಕಿಟ್ಟಿ, ಸಿಹಿಕಹಿ ಚಂದ್ರು ಹಾಗು ಪತ್ನಿ ಸಿಹಿಕಹಿ ಗೀತಾ, ಅದ್ವಿತಿ ಶೆಟ್ಟಿ, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಾಕ್ರೋಜ್ ಸುಧೀ, ಆನಂದ್ ಆಡಿಯೋ ಮಾಲೀಕರಾದ ಶ್ಯಾಮ್ ಹಾಗು ಆನಂದ್, ನಿರ್ದೇಶಕರಾದ ಕೊಡ್ಲು ರಾಮಕೃಷ್ಣ, ದಯಾಳ್ ಪದ್ಮನಾಭನ್, ಕಿರುತೆರೆ ನಟರಾದ ಕಿರಣ್ ರಾಜ್ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು ಬಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರ ನೋಡಿದ ಪ್ರತಿಯೊಬ್ಬ ತಾರೆಯರು, ಇದು ಫ್ಯಾಮಿಲಿ ಸಮೇತ ಬಂದು ನೋಡುವ ಸಿನಿಮಾ ಆಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರು ದೇಶಪಾಂಡೆ ನಿರ್ಮಿಸಿರುವ ಲವ್ ಯು ರಚ್ಚು ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನವಿದೆ. ಕೃಷ್ಣನ್ ಲವ್‌ಸ್ಟೋರಿ, ಕೃಷ್ಣಲೀಲಾ ಸಿನಿಮಾಗಳ ಸಕ್ಸಸ್ ನಂತರ ಶಶಾಂಕ್ ಅವರು ನಟ ಅಜಯ್ ರಾವ್ ಅವರಿಗಾಗಿಯೇ ಮಾಡಿಕೊಂಡಿದ್ದ ಕಥೆ ಇದಾಗಿದ್ದು, ಚಿತ್ರಕ್ಕೆ ಶಶಾಂಕ್ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಈ ಚಿತ್ರಕ್ಕೆ ಶ್ರೀಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನವಿದೆ.
ಇದನ್ನೂ ಓದಿ: ಬರ್ತಿದ್ದಾಳೆ ಲಕ ಲಕ ಲ್ಯಾಂಬೋರ್ಗಿನಿ.. ಹೊಸ ವರ್ಷಕ್ಕಾಗಿ ಚಂದನ್ ಶೆಟ್ಟಿಯಿಂದ ಬೊಂಬಾಟ್ ಹಾಡು ರಿಲೀಸ್