ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಮಗ ಬಂದ ಖುಷಿಯಲ್ಲಿದ್ದಾರೆ. ಈ ಖುಷಿಯೊಂದಿಗೆ ನಿನ್ನೆ ಯಶ್ ದಂಪತಿ ತಮ್ಮ ಮಗಳು ಐರಾಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ನಿನ್ನೆ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.
ಐರಾ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಗಳು ಆಗಮಿಸಿದ್ದರು. ದರ್ಶನ್, ಅಜಯ್ ರಾವ್, ಪುನೀತ್ ರಾಜ್ಕುಮಾರ್, ಸುಮಲತಾ ಅಂಬರೀಶ್, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಶಿವರಾಜ್ಕುಮಾರ್, ರಕ್ಷಿತ್ ಶೆಟ್ಟಿ, ಧ್ರುವಾ ಸರ್ಜಾ, ಚಿರಂಜೀವಿ ಸರ್ಜಾ, ಹಂಸಲೇಖ ದಂಪತಿ, ರಘು ಮುಖರ್ಜಿ, ರಿಷಭ್ ಶೆಟ್ಟಿ, ಶ್ರೀಮುರಳಿ, ಹಿರಿಯ ನಟಿ ಜಯಂತಿ ಹಾಗೂ ಇನ್ನಿತರ ಸೆಲಬ್ರಿಟಿಗಳು ಆಗಮಿಸಿದ್ದರು. ಇನ್ನು ತಿಳಿಗುಲಾಬಿ ಬಣ್ಣದ ಫ್ರಾಕ್ ಧರಿಸಿದ್ದ ಐರಾ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಬರ್ತಡೇ ಆಚರಣೆಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಮಕ್ಕಳ ಕುದುರೆ ಏರಿ ಮಕ್ಕಳಂತೆ ಸಂಭ್ರಮಿಸಿದರು.